ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರಿನಿಂದ ಇಳಿದು ಜನರತ್ತ ಬಂದು ಅಹವಾಲು ಸ್ವೀಕರಿಸಿದ ಬಿಎಸ್‌ವೈ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರಿನಿಂದ ಇಳಿದು ಜನರತ್ತ ಬಂದು ಅಹವಾಲು ಸ್ವೀಕರಿಸಿದ ಪ್ರಸಂಗ ಶಿವಮೊಗ್ಗದಲ್ಲಿ ನಡೆದಿದೆ.

ಸಹ್ಯಾದ್ರಿ ಕಾಲೇಜಿನಲ್ಲಿದ್ದ ಸಮಾರಂಭಕ್ಕಾಗಿ ಶಿವಮೊಗ್ಗಕ್ಕೆ ಬಂದಿದ್ದ ಸಿಎಂ ಯಡಿಯೂರಪ್ಪ ಅವರು ಭಾನುವಾರ ಬೆಳಗ್ಗೆ ಹೆಲಿಪ್ಯಾಡ್‌ನಿಂದ ಹೊರಹೋಗುತ್ತಿದ್ದರು. ಪ್ರವಾಸಿ ಮಂದಿರ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರನ್ನು ನೋಡಿ ತಕ್ಷಣವೇ ಕಾರು ನಿಲ್ಲಿಸಿ ಜನರ ಬಳಿಗೆ ಬಂದು ಮನವಿ ಸ್ವೀಕರಿಸಿದರು.

ಇದೇ ವೇಳೆ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ ತಾಲೂಕುಗಳನ್ನಾಗಿ ವಿಭಜಿಸುವಂತೆ ಶಾಸಕ ಕೆ.ಬಿ.ಅಶೋಕ ನಾಯ್ಕ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Edited By : Vijay Kumar
PublicNext

PublicNext

29/11/2020 07:59 pm

Cinque Terre

47.45 K

Cinque Terre

4