ಬೆಂಗಳೂರು (ನ. 28): ಒಂದೆಡೆ ಸಚಿವ ಸಂಪುಟ ವಿಸ್ತರಣೆಯೂ ಮಾಡುತ್ತಿಲ್ಲ. ಇನ್ನೊಂದೆಡೆ ಸಚಿವ ಸ್ಥಾನವೂ ಸಿಗುತ್ತಿಲ್ಲ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಮಿತ್ರ ಮಂಡಳಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ನಿನ್ನೆ ಖಾಸಗಿ ಹೊಟೇಲ್‌ನಲ್ಲಿ ಮಿತ್ರ ಮಂಡಳಿ ಸದಸ್ಯರು ಸಭೆ ನಡೆಸಿದ್ದಾರೆ. ಸಾಹುಕಾರ್ ರಮೇಶ್ ಜಾರಕಿಹೊಳಿ ನಡೆಯ ಬಗ್ಗೆ ಸಭೆಯಲ್ಲಿ ಅಪಸ್ವರ ಎದ್ದಿದೆ.
ರಮೇಶ್ ಜಾರಕಹೊಳಿಯನ್ನು ನಂಬಿದ್ರೆ ನಮಗೆ ಮಂತ್ರಿಗಿರಿ ಸಿಗುವುದಿಲ್ಲ. ಅವರನ್ನು ಗಂಭೀರವಾಗಿ ಪರಿಗಣಿಸೋದು ಬೇಡ. ಅವರು ನಮ್ಮ ನಾಯಕರೇ ಅಲ್ಲ. ದೆಹಲಿಯಲ್ಲಿ ನಮ್ಮ ಹೆಸರು ಬಳಸಿಕೊಂಡು, ನಾನೇ ನಾಯಕ ಎನ್ನುತ್ತಾರೆ. ಇದರಿಂದ ನಮ್ಮ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಮೂಲ ಶಾಸಕರಿಗೆ ಸ್ಥಾನ ಕೊಡುತ್ತಾರೋ, ಬಿಡ್ತಾರೋ ಗೊತ್ತಿಲ್ಲ. ನಮಗೆ ಮಾತ್ರ ಕೊಟ್ಟ ಭರವಸೆ ಈಡೇರಿಸುವಂತೆ ಕೇಳೋಣ' ಎಂದು ಮಿತ್ರ ಮಂಡಳಿ ನಿರ್ಧಾರಕ್ಕೆ ಬಂದಿದೆ.
PublicNext
28/11/2020 11:12 am