ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾನೂನು ಹೋರಾಟದಲ್ಲಿ ಕಂಗನಾಗೆ ರಿಲೀಫ್: ಕಟ್ಟಡ ತೆರವಿಗೆ ತಡೆ

ಮುಂಬೈ: ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವಿರುದ್ದದ ಕಾನೂನು ಹೋರಾಟದಲ್ಲಿ ನಟಿ ಕಂಗನಾ ರಣಾವತ್ ಗೆಲುವಿನ ನಗೆ ಬೀರಿದ್ದಾರೆ.

ಕಂಗನಾ ಒಡೆತನದ ಕಟ್ಟಡದ ಒಂದು ಭಾಗವನ್ನು ಕೆಡವಿರುವ ಬಿಎಂಸಿ ಧೋರಣೆ ದುರುದ್ದೇಶದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕೋರ್ಟ್ ಕಟ್ಟಡ ತೆರವು ಕಾರ್ಯಾಚರಣೆಗೆ ತಡೆ ನೀಡಿದೆ.

ಬಿಎಂಸಿ ವಿರುದ್ಧ ರಣಾವತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ಎಸ್.ಜೆ.ಕಾತಾವಾಲ ಮತ್ತು ಆರ್.ಐ.ಚಾಗ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಯಾವುದೇ ವ್ಯಕ್ತಿಗಳ ವಿರುದ್ಧ ಕಾರ್ಪೋರೇಷನ್‍ನವರು ಶಕ್ತಿ ಪ್ರಯೋಗ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.

ಸೆ.9ರಂದು ಬಾಂದ್ರಾದಲ್ಲಿರುವ ಕಂಗನಾ ಅವರಿಗೆ ಸೇರಿದ ಪಲಿಹಿಲ್ ಬಂಗ್ಲಾ ಅಕ್ರಮವಾಗಿದೆ ಎಂದು ಆರೋಪಿಸಿ ಬಿಎಂಸಿ ಅವರು ಕಟ್ಟಡದ ಒಂದು ಭಾಗವನ್ನು ತೆರವುಗೊಳಿಸಿದ್ದರು.

Edited By : Nagaraj Tulugeri
PublicNext

PublicNext

27/11/2020 03:23 pm

Cinque Terre

64.39 K

Cinque Terre

1

ಸಂಬಂಧಿತ ಸುದ್ದಿ