ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿರಾಶೆಯಾಗಬೇಡಿ, ಬೀಫ್ ಬಿರಿಯಾನಿ ಉಣ್ಣಲು ಬನ್ನಿ: ಬಿಜೆಪಿ ನಾಯಕರಿಗೆ ಓವೈಸಿ ಆಹ್ವಾನ

ಹೈದರಾಬಾದ್-ಸಂಸದ ಅಕ್ಬರುದ್ದೀನ್ ಓವೈಸಿ ಸದಾ ವಿವಾದಗಳ ಸುಳಿಯಲ್ಲೇ ಇರುತ್ತಾರೆ. ಬಿಹಾರ ಚುನಾವಣೆಯಲ್ಲಿ ತಮ್ಮ ಪಕ್ಷ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ.

ಹೀಗಾಗಿ ಗೆದ್ದ ಖುಷಿಯಲ್ಲಿರುವ ಓವೈಸಿ ಇತ್ತೀಚಿನ ತಮ್ಮ ಸ್ಥಳೀಯ ಚುನಾವಣಾ ಭಾಷಣವೊಂದರಲ್ಲಿ ಹೈದರಾಬಾದಿನ ಅಲಹಮ್ದುಲಿಲ್ಲಾ ಹೊಟೇಲ್ ನಲ್ಲಿ ಬಿರಿಯಾನಿ ಸವಿಯಲು ಬನ್ನಿ ಎಂದು ಬಿಜೆಪಿ ನಾಯಕರನ್ನು ಆಹ್ವಾನಿಸಿದ್ದಾರೆ.

ಈ ಹೊಟೇಲ್ ಬೀಫ್ ಖಾದ್ಯಗಳಿಗೆ ಹೆಸರಾಗಿದೆ.‌

ಸದ್ಯ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಓವೈಸಿ ಗೆದ್ದು ಬರುವ ವಿಶ್ವಾಸ ಹೊಂದಿದ್ದಾರೆ.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡ ಹೈದರಾಬಾದ್ ಪಾಲಿಕೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಅವರನ್ನೂ ಕಾಲೆಳೆದ ಓವೈಸಿ ಹೈದರಾಬಾದ್ ಹೆಸರನ್ನು ಬದಲಾಯಿಸಬೇಕೆಬ ತೇಜಸ್ವಿ ಸೂರ್ಯ ಹೇಳಿಕೆಯನ್ನು ಖಂಡಿಸಿದ್ದಾರೆ.

ಬಿರಿಯಾನಿ ಉಣ್ಣಲು ಆಹ್ವಾನಿಸಿದ ಓವೈಸಿಗೆ ಇತ್ತ ಬಿಜೆಪಿ ನಾಯಕರು ಪೊರ್ಕ್ ಬಿರಿಯಾನಿ ಉಣ್ಣಲು ಆಹ್ವಾನಿಸಿದ್ದಾರೆ.

ಸ್ಥಳೀಯ ಬಿಜೆಪಿ ಮುಖಂಡ ರಾಜಾ ಹರಿಸಿಂಗ್ ನಾನೂ ಕೂಡ ಓವೈಸಿ ಅವರಿಗೆ ಆಹ್ವಾನ ನೀಡಿದ್ದೇನೆ.

ನಾನಿರುವ ಪ್ರದೇಶದಲ್ಲಿ ವಾಲ್ಮೀಕಿ ಸಮುದಾಯದವರು ಉತ್ತಮ ಬಿರಿಯಾನಿ ಮಾಡುತ್ತಾರೆ. ಇಲ್ಲಿ ಪೊರ್ಕ್ ಬಿರಿಯಾನಿ ಕೂಡ ಲಭ್ಯವಿದೆ ಬನ್ನಿ ಎಂದು ಓವೈಸಿಗೆ ಆಹ್ವಾನ ನೀಡಿದ್ದಾರೆ.

ಒಟ್ಟಾರೆ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ರಾಜಕೀಯ ಸದ್ಯ ಬಿರಿಯಾನಿಯ ಹೆಸರಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದರಲ್ಲಿ ಸಾಗಿದೆ.

Edited By : Nagaraj Tulugeri
PublicNext

PublicNext

25/11/2020 03:45 pm

Cinque Terre

123.57 K

Cinque Terre

16

ಸಂಬಂಧಿತ ಸುದ್ದಿ