ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಾನು ಭಿಕ್ಷೆ ಎತ್ತಲೂ ಸಿದ್ಧ'

ಹೊಸಪೇಟೆ: ನಗರದಲ್ಲಿ ಪಕ್ಷದ ಕಚೇರಿ ಸ್ಥಾಪನೆಗಾಗಿ ಬಳ್ಳಾರಿ ಸೇರಿದಂತೆ ಪ್ರತಿ ತಾಲೂಕಿನಲ್ಲಿ ಭಿಕ್ಷೆ ಎತ್ತಲೂ ನಾನು ಸಿದ್ಧನಾಗಿರುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ನಡೆದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸ್ವಂತ ಕಚೇರಿ ಹೊಂದಬೇಕು. ಇದಕ್ಕಾಗಿ ದೇಣಿಗೆ ಸಂಗ್ರಹಿಸೋಣ. ಪಕ್ಷಕ್ಕಾಗಿ ಕಾರ್ಯಕರ್ತರಿಂದ ಇಟ್ಟಿಗೆ, ಸಿಮೆಂಟ್, ಐವತ್ತು, ನೂರು ರೂ. ಸಂಗ್ರಹಿಸೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

ಈ ವೇಳೆ ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಇಮಾಮ್ ನಿಯಾಜಿ ಅವರು, ಹೊಸಪೇಟೆಯಲ್ಲಿ 60/40 ಸೈಟ್‌ ದಾನವಾಗಿ ನೀಡುವುದಾಗಿ ತಿಳಿಸಿದರು. ತಕ್ಷಣವೇ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಹೆಗಲ ಮೇಲಿದ್ದ ಶಾಲನ್ನು ಇಮಾಮ್ ಅವರಿಗೆ ಹೊದಿಸಿ ಧನ್ಯವಾದ ತಿಳಿಸಿದರು.

Edited By : Vijay Kumar
PublicNext

PublicNext

24/11/2020 03:59 pm

Cinque Terre

89.1 K

Cinque Terre

9

ಸಂಬಂಧಿತ ಸುದ್ದಿ