ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಸ್ಯೆ ಹೇಳಲು ಬಂದ ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಉದಾಸಿ ದರ್ಪ

ಹಾವೇರಿ: ಸಮಸ್ಯೆ ಹೇಳಲು ಬಂದಿದ್ದ ವ್ಯಕ್ತಿಯ ಮೇಲೆ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ದರ್ಪ ತೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಭೂಮಿ ಪೂಜೆಗೆ ನವೆಂಬರ್ 20ರಂದು ಸಂಸದ ಶಿವಕುಮಾರ್ ಉದಾಸಿ ಆಗಮಿಸಿದ್ದರು. ಪೂಜೆ ಬಳಿಕ ಸಂಸದರ ಬಳಿ ಗ್ರಾಮದ ಶೇಖಪ್ಪ ಎಂಬವರು ತಮ್ಮ ಪ್ರದೇಶದ ಸಮಸ್ಯೆಗಳ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಗಮನಕ್ಕೆ ತರಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಶಿವಕುಮಾರ್ ಉದಾಸಿ, ರಸ್ತೆ ಬಂದಾಗ ಬರ್ತಿಯಿಲ್ಲ ಎಂದರು.

ಸಂಸದರ ಮಾತಿಗೆ ಪ್ರತಿಯಾಗಿ ಶೇಖಪ್ಪ ಅವರು, 'ಬಂದದ್ದು ಆಯ್ತು, ನೋಡ್ಕೊಂಡದ್ದು ಆಯ್ತು' ಎಂದು ಹೇಳಿದರು. ಅವರ ಮಾತಿನಿಂದ ಕೋಪಗೊಂಡ ಸಂಸದ ಉದಾಸಿ, 'ಆಯ್ತು ನೋಡ್ಕೋ ಹೋಗ್' ಎಂದು ಎಡಗೈಯಿಂದ ಗ್ರಾಮಸ್ಥನನ್ನ ನೂಕಿದರು. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ಕೆಲವರು ತಮ್ಮ ಮೊಬೈಲ್ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಸದರ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Edited By : Vijay Kumar
PublicNext

PublicNext

24/11/2020 03:49 pm

Cinque Terre

91.83 K

Cinque Terre

12

ಸಂಬಂಧಿತ ಸುದ್ದಿ