ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಗೆ ಸಿಬಿಐ ಮತ್ತೆ ಶಾಕ್ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನಲೆಯಲ್ಲಿ ಇದೇ ನವೆಂಬರ್ 23 ಕಚೇರಿಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ.
ಅಕ್ಟೋಬರ್ 5 ರಂದು ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಡಿ.ಕೆ.ಸುರೇಶ ಸೇರಿದಂತೆ ಅವರ ಆಪ್ತರ ನಿವಾಸಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಈಗಾಗಲೇ ತುರುಸಿನ ಬೈ ಎಲೆಕ್ಷನ್ ತಯಾರಿಯಲ್ಲಿದ್ದ ಡಿ.ಕೆ.ಶಿವಕುಮಾರ್ ಸಿಬಿಐ ವಿಚಾರಣೆಗೆ ಸೋಮವಾರ ಹಾಜರಾಗಬೇಕಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದು ಸತ್ಯ, ನವೆಂಬರ್ 19 ರಂದು ಅಧಿಕಾರಿಗಳು ನೋಟಿಸ್ ನೀಡಲು ಮನೆಗೆ ಧಾವಿಸಿದ್ದರು. ನಾನು ಮನೆಯಲ್ಲಿರದ ಕಾರಣ ನ.23 ಸಾಯಂಕಾಲ 4 ಗಂಟೆಗೆ ಕಚೇರಿಗೆ ಬರಲು ಸೂಚಿಸಿದ್ದಾರೆ. ಈಗಾಗಲೇ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ಹೋಗಲಿರುವ ಡಿಕೆ ನ.25ಕ್ಕೆ ವಿಚಾರಣೆಗೆ ಹಾಜರಾಗೋದಾಗಿ ಸಿಬಿಐ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಇಟ್ಟಿದ್ದಾರೆ.
PublicNext
21/11/2020 11:54 am