ಬಿಜೆಪಿಯನ್ನು ಪಕ್ಷವನ್ನು ಯಾವುದೇ ಸಂಘ ಪರಿವಾರ ನಿಯಂತ್ರಿಸುತ್ತಿಲ್ಲ, ಹಾಗೂ ಆರ್.ಎಸ್.ಎಸ್. ಮತ್ತು ಬಿಜೆಪಿಯೂ ಯಾವುದೇ ಸಂಬಂಧವಿಲ್ಲ. ನಾನು ಸೇರಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಘ ಪರಿವಾರದಿಂದಲೇ ಬಂದವರು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಬಿಜೆಪಿ ಪಕ್ಷವನ್ನುಯನ್ನು ಸಂಘ ಪರಿವಾರ ನಿಯಂತ್ರಿಸುತ್ತಿದೆ ಪಕ್ಷ ಸಂಘದ ಹತೋಟಿಯಲ್ಲಿದೆ, ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು ಅಶೋಕ್, ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ.
ನಿಜವಾಗಿಯೂ ಗೊಂದಲವಿರುವುದು ಕಾಂಗ್ರೆಸ್ ಪಕ್ಷದಲ್ಲಿ. ಇದನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯೇ ಹೇಳಿದ್ದು ಕಾಂಗ್ರೆಸ್ ತಟ್ಟೆಯಲ್ಲಿ ನೊಣ, ಹೆಗ್ಗಣ ಬಿದ್ದರೋವಾಗ ಅದನ್ನು ನೋಡದೇ ಬಿಜೆಪಿ ತಟ್ಟೆಯಲ್ಲಿ ಸೊಳ್ಳೆ ಬಿದ್ದಿರುವುದನ್ನು ಹುಡುಕಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.
ಲವ್ ಜಿಹಾದ್ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಂಡಿದ್ದು, ಇದರ ವಿರುದ್ಧ ಕಾನೂನು ಮಾಡಿ ಮಾಡುತ್ತೇವೆ. ಮಹಿಳೆಯರ ಮತಾಂತರ ತಡೆಯುತ್ತೇವೆ. ಲವ್ ಜಿಹಾದ್ ಭಾರತ ದೇಶದ ಸಂಸ್ಕೃತಿಗೆ ಮಾರಕ. ಲವ್ ಜಿಹಾದ್ ನಿಷೇಧಿಸಿ ಅದರಂತೆ ಗೋಹತ್ಯೆ ನಿಷೇಧ ಕಾನೂನನ್ನು ಜಾರಿ ಮಾಡುತ್ತೇವೆಂದರು.
PublicNext
21/11/2020 10:51 am