ಕೊಲಂಬೋ (ಶ್ರೀಲಂಕಾ): ಇಲ್ಲಿನ ರಾಜಕಾರಣಿಯೊಬ್ಬರು ವಿಚಿತ್ರ ಕಾರಣಕ್ಕಾಗಿ ಇದೀಗ ಸುದ್ದಿಯಲ್ಲಿದ್ದಾರೆ. ತಾವೇ ಏರ್ಪಡಿಸಿದ್ದ ಮಾಧ್ಯಮ ಗೋಷ್ಠಿಯೊಂದರಲ್ಲಿ ಹಸಿ ಮೀನನ್ನು ಕಚ ಕಚನೆ ಅಗೆದು ತಿಂದ ಈ ಡಿಫ್ರೆಂಟ್ ರಾಜಕಾರಣಿ ಇದೀಗ ಭಾರೀ ಸುದ್ದಿಯಾಗಿದ್ದಾರೆ..! ಅವರು ಹಸಿ ಮೀನನ್ನು ಕಚ್ಚಿ ತಿನ್ನುವ ವಿಡಿಯೋ ಎಲ್ಲಡೆ ಸಖತ್ ವೈರಲ್ ಆಗಿದೆ.
ದಿಲೀಪ್ ವೆದರಚ್ಚಿ ಎಂಬ ಈ ರಾಜಕಾರಣಿ, 2019ರವರೆಗೆ ಶ್ರೀಲಂಕಾ ಸರ್ಕಾರದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು. ಇದೀಗ ಶ್ರೀಲಂಕಾ ಸರ್ಕಾರದಲ್ಲಿ ಅವರು ಇಲ್ಲವಾದ್ರೂ ಪ್ರತಿಪಕ್ಷ ನಾಯಕರಾಗಿದ್ದಾರೆ. ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ಮೀನುಗಾರಿಕೆ ಕುಸಿದಿರುವ ಕಾರಣ ವಿಪರೀತ ನಷ್ಟದಲ್ಲಿದ್ದಾರೆ. ಹೀಗಾಗಿ, ಮೀನು ತಿಂದರೆ ಕೊರೊನಾ ವೈರಸ್ ಬರೋದಿಲ್ಲ ಎಂದು ಸಾಬೀತು ಮಾಡುವ ಸಲುವಾಗಿ ಸುದ್ದಿಗೋಷ್ಠಿಯಲ್ಲಿ ಹಸಿ ಮೀನನ್ನು ತಿಂದು ಸುದ್ದಿಯಾಗಿದ್ದಾರೆ..!
ಕೇವಲ ತಮ್ಮ ಮತ್ಸ್ಯೋದ್ಯಮ ಮಾತ್ರವಲ್ಲ, ಶ್ರೀಲಂಕಾ ದೇಶದ ಮತ್ಸೋದ್ಯಮವೇ ಕುಸಿದಿದೆ ಎಂದು ಬೇಸರ ಪಟ್ಟಿರುವ ಅವರು, ದೇಶದ ಆದಾಯದ ಮೂಲವೇ ಇಲ್ಲವಾಗಿದೆ ಎಂದು ಹೇಳಿದ್ದಾರೆ. ಮೀನು ತಿಂದರೆ ಕೊರೊನಾ ಬರಲ್ಲ ಎಂದು ಸಾಬೀತು ಮಾಡುವ ಸಲುವಾಗಿಯೇ ಹಸಿ ಮೀನು ತಿಂದಿರೋದಾಗಿ ದಿಲೀಪ್ ಹೇಳಿದ್ದಾರೆ.
ಮೀನನ್ನು ತಿನ್ನುವ ಮೂಲಕ ಏನೂ ಆಗೋದಿಲ್ಲ ಎಂದು ನಾನು ಸಾರುತ್ತಿದ್ದೇನೆ ಎಂದು ಘೋಷಿಸಿದ ದಿಲೀಪ್‌ಗೆ ಈಗ 63 ವರ್ಷ ವಯಸ್ಸು. ಮೀನಿನಿಂದ ಕೊರೊನಾ ಸೋಂಕು ಹರಡೋದಿಲ್ಲ ಎಂದು ಶ್ರೀಲಂಕಾ ದೇಶದಾದ್ಯಂತ ಅವರು ಪದೇ ಪದೇ ಸಾರುತ್ತಿದ್ದಾರೆ.
PublicNext
19/11/2020 06:20 pm