ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಹಾರ ಚುನಾವಣೆ: ಮಹಾ'ಕಟ್'ಬಂಧನ್ ಎಡವಿದ್ದೆಲ್ಲಿ? ಎನ್ ಡಿ ಎ ಗೆದ್ದಿದ್ದೆಲ್ಲಿ?

ಪಾಟ್ನಾ-ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಅನಿರೀಕ್ಷಿತ ಸೋಲು ಕಂಡಿದೆ‌. ಅಥವಾ ಗೆದ್ದರೂ ಸೋತಿದೆ. ಎನ್ ಡಿ ಎ ಮಿತ್ರ ಪಕ್ಷಗಳ ಕೂಟ ಕೊನೆ ಹೊತ್ತಿನಲ್ಲಿ ಅಧಿಕಾರದ ಪಟ್ಟಕ್ಕೇರಿದೆ. ಈ ಅಚ್ಚರಿಯ ರೋಚಕ ತಿರುವಿಗೆ ಕಾರಣ ಏನು? ಗೆಲುವಿನ ತುತ್ತತಿದಿಗೆ ಬಂದಿದ್ದ ಮಹಾಘಟಬಂಧನ್ ಭಾರೀ ಹಿನ್ನಡೆಗೆ ಜಾರಿದ್ದಕ್ಕೆ ಕಾರಣವೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಈಗ ರಾಜಕೀಯಾಸಕ್ತರು ಚರ್ಚೆ ಮಾಡಲಾರಂಭಿಸಿದ್ದಾರೆ.

ಒಂದೆಡೆ ಕೇಳಿ ಬರುತ್ತಿರುವ ಅಭಿಪ್ರಾಯ, ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಬಿಹಾರದಲ್ಲಿ ಹೆಚ್ಚು ವರ್ಕೌಟ್ ಆಗಿವೆ. ಹಾಲಿ ಸಿಎಂ ಅಗಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಯಾದವ್ ಹಾಗೂ ಮೋದಿ ಜೋಡಿಯನ್ನು ನೋಡಿ ಮತದಾರರು ಕೈ ಹಿಡಿದಿದ್ದಾರೆ‌ ಎನ್ನಲಾಗ್ತಾ ಇದೆ‌. ಜೊತೆಗೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್, ಲಾಕ್ ಡೌನ್ ಅವಧಿಯಲ್ಲಿ ಉಚಿತ ಪಡಿತರ ಸಕ್ಸಸ್ ಕಂಡಿದೆ.

ಇನ್ನು ಮಹಾಘಟಬಂಧನ್ ಸೋಲಿಗೆ ಕಾರಣಗಳ ಜನಾಭಿಪ್ರಾಯ ನೋಡೋದಾದ್ರೆ ಆರ್ ಜೆ ಡಿ ನೇತೃತ್ವದ ಮಹಾಘಟಬಂಧನ್ ಅಬ್ಬರದ ಪ್ರಚಾರಕ್ಕೆ ಆದ್ಯತೆ ನೀಡಿದೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಆದ್ಯತೆ ನೀಡಿಲ್ಲ. ಕಾಂಗ್ರೆಸ್ಸಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿ ತಾನು ಗೆಲ್ಲುವ ಸ್ಥಾನಗಳನ್ನು ಆರ್ ಜೆ ಡಿ ಉಳಿಸಿಕೊಂಡಿದೆ. ಎಐಎಂಐಎಂ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದೆ. ಹೀಗಾಗಿ ಇದರಿಂದ ಮುಸ್ಲಿಂ ಮತಗಳು ಹರಿದು ಹಂಚಿಹೋಗಿವೆ. ಈ ಎಲ್ಲ ಕಾರಣಗಳು ಮಹಾಘಟಬಂಧನ್ ಹಿನ್ನಡೆಯಾಗಲು ಪ್ರಮುಖ ಕಾರಣಗಳಾಗಿವೆ.

Edited By : Nagaraj Tulugeri
PublicNext

PublicNext

11/11/2020 10:53 am

Cinque Terre

43.31 K

Cinque Terre

1