ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಂಪ್ ಗೆ ಡೈವೋರ್ಸ್ ಕೊಡ್ತಾರಂತೆ ಮೆಲಾನಿಯಾ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿರುವ ಡೊನಾಲ್ಡ್ ಟ್ರಂಪ್ ಈಗ ಪತ್ನಿಯಿಂದ ಬೇರೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬರತೊಡಗಿವೆ.

ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ತಮ್ಮ 15 ವರ್ಷಗಳ ಟ್ರಾನ್ಸಾಕ್ಷನಲ್ ವಿವಾಹವನ್ನು ಅಂತ್ಯಗೊಳಿಸಲು ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ಡೊನಾಲ್ಡ್ ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸುತ್ತಿದ್ದಂತೆಯೇ ಟ್ರಂಪ್ ಪತ್ನಿ ವಿಚ್ಛೇದನ ನೀಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಶ್ವೇತ ಭವನದ ಮೂಲಗಳಿಂದ ಮಾಹಿತಿ ದೊರೆತಿದೆ.

ಟ್ರಂಪ್ ಹಾಗು ಮೆಲಾನಿಯಾ ಟ್ರಂಪ್ ಇಬ್ಬರ 15 ವರ್ಷಗಳ ಟ್ರಾನ್ಸಾಕ್ಷನಲ್ ಮದುವೆ ಅಂತ್ಯಗೊಳ್ಳಲಿದೆ. ಶ್ವೇತ ಭವನದಲ್ಲಿರುವಷ್ಟು ದಿನ ಮಾತ್ರವೇ ಟ್ರಂಪ್-ಮೆಲಾನಿಯಾ ಜೊತೆಯಲ್ಲಿರಲಿದ್ದಾರೆ. ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪತ್ನಿ ವಿಚ್ಛೇದನ ನೀಡಲಿದ್ದಾರೆ ಎಂದು ಒಮರೋಸಾ ಮನಿಗಾಲ್ಟ್ ನ್ಯೂಮನ್ ಡೈಲಿ ಮೇಲ್ ಗೆ ಮಾಹಿತಿ ನೀಡಿದ್ದಾರೆ.

ಟ್ರಂಪ್ ಅಧಿಕಾರದಲ್ಲಿರುವಾಗ ವಿಚ್ಛೇದನ ನೀಡಿದರೆ ತಮ್ಮನ್ನು ಶಿಕ್ಷಿಸುವ ಮಾರ್ಗಗಳು ಇರುತ್ತವೆ ಆದ ಕಾರಣ ಅಧಿಕಾರಾವಧಿ ಮುಕ್ತಾಯಗೊಂಡ ನಂತರ ವಿಚ್ಛೇದನ ನೀಡಲು ಮೆಲಾನಿಯಾ ಟ್ರಂಪ್ ಚಿಂತನೆ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

09/11/2020 03:48 pm

Cinque Terre

44.18 K

Cinque Terre

1