ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುರಂತಗಳ ಸರಮಾಲೆ ಧರಿಸಿಯೇ ಅಮೇರಿಕದ ನೂತನ ಅಧ್ಯಕ್ಷರಾದ ಜೋ ಬೈಡನ್

ಪಬ್ಲಿಕ್ ನೆಕ್ಸ್ಟ್ ಅವಲೋಕನ : ಕೇಶವ ನಾಡಕರ್ಣಿ

ಭಾರೀ ಕುತೂಹಲ ಕೆರಳಿಸಿದ್ದ ಅಮೇರಿಕ ಅಧ್ಯಕ್ಷೀಯ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದ್ದು, 77 ವರ್ಷ ಜೋ ಬೈಡನ್ ಅಮೇರಿಕದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮೇರಿಕದ ಇತಿಹಾಸದಲ್ಲಿಯೇ ಇದು ಅತ್ಯಂತ ನಿರ್ಣಾಯಕ ಚುನಾವಣೆ ಎಂದು ಭಾವಿಸಲಾಗಿತ್ತು.

36 ವರ್ಷಗಳ ಕಾಲ ಸೆನೆಟರ್ , 8 ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಜೋ ಬೈಡನ್ ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. ಆದರೆ ಪ್ರಸಕ್ತ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದರಲ್ಲದೆ ನಿರೀಕ್ಷೆಗೂ ಮೀರಿ ಗೆಲವು ಸಾಧಿಸುವ ಮೂಲಕ ಡೋನಾಲ್ಡ್ ಟ್ರಂಪ್ ಗೆ ತೀವ್ರ ಆಘಾತ ನೀಡಿದ್ದಾರೆ.

ಜೀವನದಲ್ಲಿ ಎಂತಹುದೇ ಕಷ್ಟ, ಆಘಾತಗಳು ಬಂದರೂ ಎದೆಗುಂದಬಾರದು, ನಿರಾಶಾವಾದಿಗಳಾಗಬಾರದು ಎಂಬುದಕ್ಕೆ ನೂತನ ಅಧ್ಯಕ್ಷ ಮಾದರಿ. ಎಂತಹ ಕಷ್ಟಗಳು ಬಂದರೂ ಗಟ್ಟಿಯಾಗಿ ನಿಂತು ಎದುರಿಸಿ ಮುನ್ನಡೆಯಬೇಕು ಎಂದು ಹೇಳುವ ಬೈಡನ್ ಇಂದಿನ ಯುವಜನಾಂಗಕ್ಕೆ ರೋಲ್ ಮಾಡಲ್.

ಸಣ್ಣಪುಟ್ಟ ಕೌಟುಂಬಿಕ ಸಮಸ್ಯೆಗಳು, ತೊಂದರೆಗಳು, ವೈಫಲ್ಯಗಳನ್ನು ಎದುರಿಸಲಾಗದೆ ಅನೇಕರು ತಮ್ಮ ಅಮೂಲ್ಯ ಬದುಕನ್ನೇ ನಾಶಮಾಡಿಕೊಳ್ಳುತ್ತಾರೆ. ಆದರೆ ಜೋ ಬೈಡನ್ ಜೀವನದಲ್ಲಿ ಸಂಭವಿಸಿದ ದುರಂತಗಳು ಒಂದಲ್ಲ ಎರಡಲ್ಲ, ದುರಂತಗಳ ಸರಮಾಲೆಯನ್ನೇ ಧರಿಸಿ ಎಲ್ಲವನ್ನೂ ಸಮಚಿತ್ತದಿಂದ ಎದುರಿಸಿ ಇಂದು ವಿಶ್ಚದ ದೊಡ್ಡಣನಾಗಿರುವ ಅಮೇರಿಕದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಜೋ ಬೈಡನ್ ಆಗ ಕೇವಲ 29 ವರ್ಷ, ಉತ್ಸಾಹಿ ಯುವಕರಾಗಿ ಜೀವನದ ಪಯಣದಲ್ಲಿದ್ದಾಗ ಪತ್ನಿ ಹಾಗೂ ಪುತ್ರಿಯನ್ನು ಕಳೆದುಕೊಂಡು ತೀವ್ರ ನೋವನ್ನು ಎದುರಿಸಬೇಕಾಯಿತು.

ಡೆಮಾಕ್ರಿಟಿಕ್ ಪಾರ್ಟಿ ನಾಯಕರಾಗಿದ್ದ 46 ವರ್ಷದ ಪುತ್ರನನ್ನು 2015 ರಲ್ಲಿ ಬೈಡನ್ ಕಳೆದುಕೊಳ್ಳಬೇಕಾಯಿತು. ಇದಕ್ಕೂ ಮೊದಲು ಅವರು ಎರಡು ಚುನಾವಣೆಗಳಲ್ಲಿ ಸೋಲು ಅನುಭವಿಸಬೇಕಾಗಿತ್ತು. ಪತ್ನಿ,ಪುತ್ರಿ ಪುತ್ರರ ಸಾವು , ಚುನಾವಣೆಯಲ್ಲಿ ಸೋಲಿನ ಬೈಡನ್ ದೃತಿಗೆಡಲಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲೇ ಬೇಕೆಂಬ ಸಂಕಲ್ಪ ತೊಟ್ಟಿದ ಇವರು ಅಮೇರಿಕದ ಅಧ್ಯಕ್ಷರಾಗಲು ಅವರು 50 ವರ್ಷ ಕಾದರು, ಕೊನೆಗೂ ಯಶಸ್ವಿಯಾದರು.

1942 ರಲ್ಲಿ ಅಮೇರಿಕದ ಸ್ಕ್ರಾನಟಾನ್ ಪ್ರಾಂತ್ಯದಲ್ಲಿ ಜನಿಸಿ ಬಹುತೇಕ ತಮ್ಮ ಜೀವತಾವಧಿಯನ್ನು ಅಲ್ಲಿಯೇ ಕಳೆದು. ಅದಕ್ಕೂ ಪೂರ್ವದಲ್ಲಿ ತಮ್ಮ ಯೌವನಾವಸ್ಥೆಯನ್ನು ಡೆಲ್ವಾರೆ ಎಂಬಲ್ಲಿ ಕಳೆದು ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣ ಮುಂದುವರೆಸಿದ್ದರು. 1968 ಸೈರಾಕಸ್ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕ ಪದವಿಯನ್ನು ಪಡೆದರು.

Edited By : Manjunath H D
PublicNext

PublicNext

08/11/2020 05:07 pm

Cinque Terre

206.08 K

Cinque Terre

4