ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ:ಸಮೀಕ್ಷೆ ವರದಿ

ನವದೆಹಲಿ- ಬಿಹಾರ್ ಚುನಾವಣೆಯಲ್ಲಿ ಈ ಬಾರಿ ನಿತೀಶ್ ಕುಮಾರ್ ಯಾದವ್ ಅವರಿಗೆ ಸಿಎಂ ಸ್ಥಾನ ತಪ್ಪಲಿದೆ ಹಾಗೂ ತೇಜಸ್ವಿ ಯಾದವ್ ಅವರಿಗೆ ಅಧಿಕಾರ ಸಿಗಲಿದೆ ಎಂದು ಸಿ- ವೋಟರ್ ಮತದಾನೋತ್ತರ ಸಮೀಕ್ಷೆ ಹೇಳಿದೆ.

ಬಿಹಾರ್ ಸಿಎಂ ನಿತೀಶ್ ಕುಮಾರ್ ಯಾದವ್ ಅವರು ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಆದ್ರೆ ಅವರು ಈ ಬಾರಿ ಅಧಿಕಾರ ಕಳೆದುಕೊಳ್ಳಲಿದ್ದಾರೆ‌. ಬದಲಾಗಿ ಆರ್ ಜೆ ಡಿ ಪಕ್ಷದ ತೇಜಸ್ವಿ ಯಾದವ್ ಅವರಿಗೆ ಅಧಿಕಾರ ಸಿಗಲಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಯ ಅಭಿಪ್ರಾಯವಾಗಿದೆ.

ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಹಾರದಲ್ಲಿ ಎನ್ ಡಿ ಎ 116 ಸ್ಥಾನಗಳನ್ನು ಗೆಲ್ಲಲಿದೆ. ಮಹಾಘಟಬಂಧನ್ 120 ಸ್ಥಾಗಳಲ್ಲಿ ಗೆಲುವು ಸಾಧಿಸಲಿದೆ. ಇತರರು 6 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆ. ಆದ್ರೆ ಬಹುಮತ ಪಡೆದು ಸರ್ಕಾರ ರಚಿಸಲು ಖಚಿತ 122 ಸ್ಥಾನಗಳು ಬೇಕಾಗಿದೆ.

Edited By : Nagaraj Tulugeri
PublicNext

PublicNext

07/11/2020 07:10 pm

Cinque Terre

100.71 K

Cinque Terre

3