ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರೆಯದಿದ್ದರೂ ಬಂದು ಕೂತ ಶಾಸಕ ಹ್ಯಾರಿಸ್ ಪುತ್ರ ನಲಪಾಡ್

ಬೆಂಗಳೂರು- ಆಮಂತ್ರಣ ಇಲ್ಲದಿದ್ದರೂ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್, ಸಿಎಂ ಯಡಿಯೂರಪ್ಪ ಇದ್ದ ವೇದಿಕೆ ಹತ್ತಿ ಕುಳಿತಿದ್ದಾರೆ.

ನಗರದಲ್ಲಿ ಕ್ಲೀನ್ ಏರ್ ಸ್ಟ್ರೀಟ್ ಪರಿಕಲ್ಪನೆಗೆ ಸಿಎಂ ಯಡಿಯೂರಪ್ಪ ಚಾಲನೆ‌ ನೀಡಿದರು. ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮೊಹಮದ್ ನಲಪಾಡ್, ತಮ್ಮ ತಂದೆ ಎನ್ ಎ ಹ್ಯಾರಿಸ್ ಕೂತಿದ್ದ ಹಿಂಬದಿಯ ಸಾಲಿನ ಕುರ್ಚಿ ಮೇಲೆ ಕುಳಿತರು.

ಇದನ್ನ ಕಂಡ ಅಲ್ಲಿದ್ದ ಅಧಿಕಾರಿಗಳು ಹಾಗೂ ಕಾರ್ಯಕ್ರಮ ಸಂಘಟಕರು, ಸರ್ಕಾರಿ ಕಾರ್ಯಕ್ರಮದಲ್ಲಿ ನಲಪಾಡ್ ಗೆ ಏನು ಕೆಲಸ? ಇವರನ್ನು ಯಾರಿಲ್ಲಿಗೆ ಕರೆದಿದ್ದು? ಯಾಕೆ ವೇದಿಕೆ ಮೇಲೆ ಬಂದ್ರು? ಎಂದು ಗೊಂದಲದಿಂದ ಚರ್ಚಿಸತೊಡಗಿದರು.

ಇದಿಷ್ಟೇ ಅಲ್ಲ‌; ಶಾಸಕ ಹ್ಯಾರಿಸ್ ಅವರ ಹಿಂದೆ ಕೂತಿದ್ದ ಪುತ್ರ ನಲಪಾಡ್ ಹ್ಯಾರಿಸ್ ಕ್ಯಾಮೆರಾಗಳತ್ತ ಒಂದೇ ಸಮನೆ ಪೋಸ್ ಕೊಡುತ್ತಿದ್ದರು‌.

Edited By : Nagaraj Tulugeri
PublicNext

PublicNext

07/11/2020 02:53 pm

Cinque Terre

75.45 K

Cinque Terre

1

ಸಂಬಂಧಿತ ಸುದ್ದಿ