ಉಡುಪಿ- ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸಚಿವ ಕೆ ಎಸ್ ಈಶ್ವರಪ್ಪ, ಆ ಬಗ್ಗೆ ನಿಮಗೆ ಮೋದಿ ಅಥವಾ ಶಾ ಫೋನ್ ಮಾಡಿ ಹೇಳಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ. ಸಿಎಂ ಸ್ಥಾನ ಹೋದ ಮೇಲೆ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ. ರಾಜ್ಯದಲ್ಲಿ ಯಾಕೆ ಸಿಎಂ ಬದಲಾವಣೆ ಆಗ್ಬೇಕು? ಎಂದು ಪ್ರಶ್ನಿಸಿದರು.
ಸಿಎಂ ಬದಲಾವಣೆ ಸುದ್ದಿ ಸಿದ್ದರಾಮಯ್ಯನಿಗೆ ಆಕಾಶದಿಂದ ಉದುರಿದೆಯಾ? ಅಥವಾ ಮೋದಿ, ನಡ್ಡಾ, ಅಮಿತ್ ಶಾ ಏನಾದ್ರೂ ಫೋನ್ ಮಾಡಿ ಹೇಳಿದ್ರಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ನಾನೀಗ ದೇವಸ್ಥಾನದಲ್ಲಿದ್ದೀನಿ ಇಲ್ಲದಿದ್ರೆ ಇನ್ನೂ ಕೆಟ್ಟ ಪದ ಬಳಸ್ತಿದ್ದೆ ಎಂದು ಸಿಡಿಮಿಡಿಗೊಂಡರು.
ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ ಅನ್ನೋದಾದ್ರೆ ಪ್ರಕರಣದ ಕುರಿತಾಗಿ ತನಿಖೆ ಮಾಡೋದು ಕೂಡಾ ತಪ್ಪಾ? ಹಾಗಾದ್ರೆ ಕಾಂಗ್ರೆಸ್ ಪಕ್ಷ ಕೊಲೆಗೆ ಬೆಂಬಲ ಕೊಡುತ್ತಾ? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಮ್ಮವರನ್ನೆಲ್ಲ ಜೈಲಿಗೆ ಕಳಿಸಿದ್ದು ರಾಜಕೀಯ ಪ್ರೇರಿತನಾ? ಎಂದು ಈಶ್ವರಪ್ಪ ಪ್ರಶ್ನಿಸಿದರು.
PublicNext
06/11/2020 01:04 pm