ನವದೆಹಲಿ- ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಅವರು ಅಮೆರಿಕದ ನ್ಯೂಜೆರ್ಸಿ ಹಾಗೂ ನ್ಯೂಯಾರ್ಕ್ ರಾಜ್ಯಗಳಲ್ಲಿ ಜಯಗಳಿಸಿದ್ದಾರೆ. ಇನ್ನು ಡೊನಾಲ್ಡ್ ಟ್ರಂಪ್ ಅವರು ಇತರ ಪ್ರಮುಖ ರಾಜ್ಯಗಳಲ್ಲಿ ಜಯ ಸಾಧಿಸಿದ್ದಾರೆ.
ನ್ಯೂಯಾರ್ಕ್ ರಾಜ್ಯದಲ್ಲಿ ಬೈಡೆನ್ ಅವರು 2.2 ಮಿಲಿಯನ್ ಮತ ಗಳಿಸಿದರೆ ಟ್ರಂಪ್ ಅವರು 1.2 ಮಿಲಿಯನ್ ಮತ ಗಳಿಸಿದ್ದಾರೆ. ಜೋ ಬೈಡೆನ್ ಅವರು ಕೊಲೊರಾಡೊ, ಕನೆಕ್ಟಿಕಟ್, ಇಲಿನಾಯ್ಸ್, ಮಸಾಚುಸೆಟ್ಸ್, ನ್ಯೂ ಮೆಕ್ಸಿಕೋ, ವೆರ್ಮೊಂಟ್, ವರ್ಜೀನಿಯಾದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇನ್ನೂ ಕೂಡ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಮೆರಿಕ ಜನರ ಕುತೂಹಲ ಇಮ್ಮಡಿಯಾಗಿದೆ.
PublicNext
04/11/2020 02:14 pm