ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ ಕದನದಲ್ಲಿ ವಿಜಯೇಂದ್ರಗೆ ಎಚ್‌ಡಿಕೆ ಸವಾಲು

ಬೆಂಗಳೂರು: ಶಿರಾ ಹಾಗೂ ಆರ್‌ಆರ್‌ ನಗರ ಉಪ ಚುನಾವಣೆ ಪ್ರಚಾರ ಭರ್ಜರಿ ಜೋರಾಗಿದೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾತನಾಡಿದ ಮಾಜಿ ಸಿಎಂ, ಈಗಾಗಲೇ ವಿಜಯೇಂದ್ರ ಅವರ ಡ್ರಾಮಾ ಹಳಸಿದೆ. ವಿಜಯೇಂದ್ರ ಆಟ ನಡೆಯುತ್ತಿರುವುದು ಹಣದಿಂದ. ಅವರೇನು ದೊಡ್ಡ ಸಾಧನೆ ಮಾಡಿದ್ದಾರಾ? ಇದು ಎಲ್ಲಾ ಸಮಯದಲ್ಲೂ ಉಪಯೋಗಕ್ಕೆ ಬರುವುದಿಲ್ಲ. ಅವರ ಡ್ರಾಮಾ ನಡೆಯುತ್ತೋ, ನಮ್ಮ ಡ್ರಾಮಾ ನಡೆಯುತ್ತೋ ಎಂದು ಚುನಾವಣೆ ಫಲಿತಾಂಶದಂದು ನೋಡೋಣ ಎಂದು ಸವಾಲು ಹಾಕಿದ್ದಾರೆ.

ವಿಜಯೇಂದ್ರ ತಮ್ಮ ತಂದೆಯ ಸಿಎಂ ಯಡಿಯೂರಪ್ಪ ಅವರ ಸಹಿಯನ್ನು ಅವರೇ ಮಾಡಿ ಏನೇನು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅವರ ತಂದೆ ಹೆಸರಲ್ಲಿ ದುಡ್ಡು ಹೊಡೆದಿದ್ದಾರೆ. ಅದನ್ನು ತಂದು ಈಗ ಇಲ್ಲಿ ಚುನಾವಣೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Edited By : Vijay Kumar
PublicNext

PublicNext

01/11/2020 03:56 pm

Cinque Terre

58.16 K

Cinque Terre

1