ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸರಳ ಮೈಸೂರು ದಸರಾಗೆ 2.05 ಕೋಟಿ ರೂ. ಖರ್ಚು'

ಮೈಸೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಿದ ಮೈಸೂರು ದಸರಾ ಮಹೋತ್ಸವಕ್ಕೆ ಒಟ್ಟು ₹2.05 ಕೋಟಿ ಖರ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ದಸರಾ ಆಚರಣೆಗೆ ಆಗಿರುವ ವೆಚ್ಚದ ವಿವರವನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಸಚಿವರು, ‘ರಾಜ್ಯ ಸರ್ಕಾರವು ಈ ಬಾರಿಯ ದಸರೆಗೆ 10 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ದಸರಾ ಆಚರಣೆಗೆ ಕ್ರಮವಾಗಿ 50 ಮತ್ತು 36 ಲಕ್ಷ ರೂ. ನೀಡಲಾಗಿದೆ. ಇನ್ನುಳಿದ ₹9.14 ಕೋಟಿಗಳಲ್ಲಿ ಮೈಸೂರು ದಸರಾ ಆಚರಣೆಗೆ ₹2,05,83,167 ಮೊತ್ತ ಖರ್ಚಾಗಿದೆ. ಉಳಿಕೆಯಾಗಿರುವ ₹7,08,16,833 ಮೊತ್ತ ಜಿಲ್ಲಾಧಿಕಾರಿಯ ಖಾತೆಯಲ್ಲಿ ಇದೆ. ಈ ಹಣವನ್ನು ಮೈಸೂರಿನಲ್ಲಿ ಯಾವ ಉದ್ದೇಶಕ್ಕೆ ಖರ್ಚು ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

Edited By : Vijay Kumar
PublicNext

PublicNext

01/11/2020 03:14 pm

Cinque Terre

46.62 K

Cinque Terre

1