ಪಾಟ್ನಾ: ಬಿಹಾರ ಚುನಾವಣೆ ರಂಗೇರುತ್ತಿದ್ದು ಕಾಂಗ್ರೆಸ್, ಆರ್‌ಜೆಡಿ ಹಾಗೂ ಎನ್‌ಡಿಎ ಮೈತ್ರಿಕೂಟವು ಭರ್ಜರಿ ಪ್ರಚಾರ ನಡೆಸಿದೆ. ಆದರೆ ಸಾರ್ವಜನಿಕ ಪ್ರಚಾರದ ವೇಳೆ ವೇದಿಕೆ ಕುಸಿದು ಬಿದ್ದು ಅದೃಷ್ಟವಶಾತ್ ಕಾಂಗ್ರೆಸ್ ಅಭ್ಯರ್ಥಿ ಬಚಾವ್ ಆಗಿದ್ದಾರೆ.
ಬಿಹಾರದ ಜೇಲ್ ವಿಧಾನಸಭಾ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಮಶ್ಕೂರ್ ಅಹ್ಮದ್ ಉಸ್ಮಾನಿ ದರ್ಬಂಗದಲ್ಲಿ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಈ ವೇಲೆ ಏಕಾಏಕಿ ವೇದಿಕೆ ಕುಸಿದು ಬಿದ್ದಿದೆ. ಇದರಿಂದಾಗಿ ಭಾಷಣ ಮಾಡುತ್ತಿದ್ದ ಮಶ್ಕೂರ್ ಅಹ್ಮದ್ ಉಸ್ಮಾನಿ ಮುಗ್ಗರಿಸಿದರು. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
29/10/2020 07:03 pm