ಮಿಲ್ವೌಕಿ(ಅಮೆರಿಕ)- ಅಧ್ಯಕ್ಷ ಸ್ಥಾನದ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ತಮ್ಮದೇ ದೇಶಸ ಮಾಧ್ಯಮಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ
ತಮ್ಮ ಎದುರಾಳಿ ಅಭ್ಯರ್ಥಿ ಡೆಮಾಕ್ರೆಟಿಕ್ ಪಕ್ಷದ ಜೊ ಬೈಡೆನ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಮಾಧ್ಯಮಗಳು ವರದಿ ಮಾಡಿಲ್ಲ. ಮತ್ತು ಅದನ್ನು ಮರೆಮಾಚುತ್ತಿವೆ ಅನ್ನೋದು ಅವರ ಆರೋಪವಾಗಿದೆ.
ಮಾಧ್ಯಮಗಳ ಇಂತಹ ನಡೆಯನ್ನು ನಾನು ಕಂಡಿರಲಿಲ್ಲ. ಜೊ ಬೈಡನ್ ಅವರನ್ನು ರಕ್ಷಿಸುವ ಕೆಲಸ ನಡೆದಿದೆ. ಏಕೆಂದರೆ ಅವರನ್ನು ಶ್ರೀಮಂತರಾಗಿಸುವ ಕೆಲಸವನ್ನು ಬೈಡನ್ ಮಾಡ್ತಿದ್ದಾರೆ. ಹೀಗಾಗಿ ಅವರ ಬಗ್ಗೆ ಒಂದೇ ಒಂದು ನಕಾರಾತ್ಮಕ ವರದಿಗಳು ಪ್ರಸಾರವಾಗಿಲ್ಲ, ಪ್ರಕಟವಾಗಿಲ್ಲ. ಸಾಮಾಜಿಕ ಮಾಧ್ಯಮಗಳು ಸಹಿತ ಜೊ ಬೈಡನ್ ಅವರನ್ನೇ ಬೆಂಬಲಿಸುತ್ತಿವೆ. ಆದ್ರೆ ಸತ್ಯ ಏನೆಂಬುದು ಜನಕ್ಕೆ ಗೊತ್ತಿದೆ ಎಂದು ಟ್ರಂಪ್ ಅಸಮಾಧಾನಗೊಂಡಿದ್ದಾರೆ.
PublicNext
28/10/2020 12:40 pm