ಕೋವಿಡ್ ಕಾರಣದಿಂದ ಇದೇ ಮೊದಲ ಬಾರಿಗೆ ಮೈಸೂರು ದಸರಾ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಗಿದೆ. ಉತ್ಸವದ ಎಲ್ಲ ಕೈಂಕರ್ಯಗಳಿಗೆ ಸಹಕರಿಸಿದ ಸಿಬ್ಬಂದಿ ಹಾಗೂ ಮಾಧ್ಯಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಧನ್ಯವಾದ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲ್ಪಟ್ಟ ಈ ಬಾರಿಯ ದಸರಾ ನೆನಪು ಉಳಿಯುವಂತಹ ಕಾರ್ಯಕ್ರಮವಾಗಿದೆ. ಈ ಬಾರಿಯ ದಸರಾ ಉತ್ಸವವನ್ನು ಸರಳ, ಸಾಂಪ್ರದಾಯಿಕ ಮತ್ತು ವರ್ಚುವಲ್ ದಸರಾ ಎಂದು ಕರೆಯಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜಿನಲ್ಲಿಯೇ ಉತ್ಸವದ ಲೈವ್ ನೋಡುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಲಕ್ಷಾಂತರ ಜನ ನೇರ ಪ್ರಸಾರ ವೀಕ್ಷಿಸಿದ್ದಾರೆ ಎಂದರು.
ಈ ಬಾರಿಯ ದಸರಾ ಆಚರಣೆಗೆ ರಾಜ್ಯ ಸರ್ಕಾರದಿಂದ ಹತ್ತು ಕೋಟಿ ಅನುದಾನ ಒದಗಿತ್ತು. ಅಷ್ಟರಲ್ಲೇ ಆಚರಣೆ ಮುಗಿದಿದೆ. ಉಳಿದ ಹಣದ ಬಗ್ಗೆ ಹಾಗೂ ಖರ್ಚಾಗಿದ್ದರ ಬಗ್ಗೆ ನ.1ರಂದು ಲೆಕ್ಕ ನೀಡಲಾಗುವುದು ಎಂದು ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
PublicNext
27/10/2020 02:25 pm