ಬೆಂಗಳೂರು: ಆಯುಧ ಪೂಜೆ ಹಿನ್ನೆಲೆಯಲ್ಲಿ ಶಾಸಕಿ ಸೌಮ್ಯ ರೆಡ್ಡಿ ಅವರು ಒಂದೇ ಫೋಟೋದಲ್ಲಿರುವ ಗಣೇಶ್, ಯೇಸು ಹಾಗೂ ಮೆಕ್ಕಾ-ಮದೀನಾಗೆ ಪೂಜೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಪಾಲಿ ಬೆಟ್ಟದಲ್ಲಿ ಯೇಸು ಮೂರ್ತಿ ನಿಲ್ಲಿಸಿ ವಿವಾದಕ್ಕೆ ಗುರಿಯಾಗಿದ್ದರು. ಜ್ಯಾತ್ಯಾತೀತರು ಎಂದು ತೋರಿಸಲು ಕಾಂಗ್ರೆಸ್ಸಿಗರು ಯಾವಾಗಲೂ ಬಹು ಸಂಖ್ಯಾತ ಹಿಂದೂಗಳ ಮನಸ್ಸಿಗೆ ಘಾಸಿ ಮಾಡುವುದು ಮಾಮೂಲು. ಅಂದರೆ ಅನಗತ್ಯ ವಿವಾವದ ಉಂಟು ಮಾಡುವುದು ಕಾಂಗ್ರೆಸ್ಸಿಗರ ಜಾಯಮಾನ. ಅದಕ್ಕೆ ಇದು ಮತ್ತೊಂದು ಉದಾಹರಣೆ. ಅದರಲ್ಲೂ ಹಿಂದೂಗಳು ಸಂಭ್ರಮದಿಂದ ದಸರಾ ಆಚರಿಸುತ್ತಿರುವಾಗ ಈ ರೀತಿ ಜಾತ್ಯಾತೀತತೆ ಮುಖವಾಡ ಧರಿಸುವುದು ಅಗತ್ಯವಿತ್ತೆ ಎಂದು ಹಿಂದೂ ಬಾಂಧವರು ಪ್ರಶ್ನಿಸುತ್ತಿದ್ದಾರೆ.
ಆಯುಧ ಪೂಜೆ ಹಿನ್ನೆಲೆಯಲ್ಲಿ ಸೌಮ್ಯ ರೆಡ್ಡಿ ಅವರು ಅವರು ಗಣೇಶ್, ಯೇಸು ಹಾಗೂ ಮೆಕ್ಕಾ-ಮದೀನಾ ಫೋಟೋ ಜೊತೆಗೆ ಸಂವಿಧಾನ ಪುಸ್ತಕಕ್ಕೆ ಇಂದು ಪೂಜೆ ಸಲ್ಲಿಸಿದ್ದಾರೆ. ಈ ಫೋಟೋವನ್ನು ಟ್ವೀಟ್ ಮಾಡಿರುವ ಸೌಮ್ಯ ರೆಡ್ಡಿ, 'ಜಯನಗರದ ಶಾಸಕರ ಕಚೇರಿಯಲ್ಲಿ ನನ್ನ ತಂದೆ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಅವರೊಂದಿಗೆ ಆಯುಧ ಪೂಜೆ ನೆರವೇರಿಸಿ, ಪವಿತ್ರ ಸಂವಿಧಾನ ಗ್ರಂಥಕ್ಕೆ ಪೂಜೆ ಸಲ್ಲಿಸಲಾಯಿತು' ಎಂದು ಬರೆದುಕೊಂಡಿದ್ದಾರೆ.
ಶಾಸಕಿ ಸೌಮ್ಯ ರೆಡ್ಡಿ ಅವರ ನಡೆಗೆ ಭಾರೀ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು, 'ಈ ರೀತಿ ಎಲ್ಲಾ ಧರ್ಮದ ಫೋಟೋ ಇಟ್ಟು ಪೂಜಿಸಿದಂತೆ ಮಸೀದಿಯಲ್ಲಿ ಹಿಂದೂ ದೇವರ ಫೋಟೋ ಇಟ್ಟು ಪೂಜಿಸುವ ತಾಕತ್ ಇದಿಯಾ' ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಕೂಡ ಟ್ವೀಟ್ ಮಾಡಿ, 'ಸೌಮ್ಯ ರೆಡ್ಡಿಯವರೇ ಹಿಂದೂ ಸಂಸ್ಕೃತಿಯನ್ನ ಅಣಕಿಸುವ ನೀವು, ಕ್ರಿಸ್‌ಮಸ್ ದಿನದಂದು ಚರ್ಚ್ ನಲ್ಲಿ ಮತ್ತು ಬಕ್ರೀದ್ ದಿನದಂದು ಮಸೀದಿಯಲ್ಲಿ ಹಿಂದೂ ದೇವರ ಫೊಟೊ ಇಟ್ಟು ಪೂಜೆ ಮಾಡಿ ನಿಮ್ಮ ಜಾತ್ಯಾತಿಯತೆ ತೋರಿಸಿ. ತಾವು ಏನೇ ಮಾಡಿದರೂ ಸಹಿಸಿಕೊಳ್ಳುತ್ತಾರೆ ಎನ್ನುವ ಹಿಂದೂಗಳು ಪ್ರಶ್ನೆಮಾಡಲ್ಲ ಅನ್ನೋ ಅಹಂಕಾರ ನಿಮಗೆ' ಎಂದು ಕಿಡಿಕಾರಿದ್ದಾರೆ.
ಕೆ.ಸಿ.ಕಿರಣ್ ಎನ್ನುವವರು ಟ್ವೀಟ್ ಮಾಡಿ, ವೋಟ್‌ಗಾಗಿ ಇನ್ನೂ ಯಾವ ಡ್ರಾಮಾ ಬೇಕಾದರೂ ಮಾಡ್ತಾರೆ ಎಂದು ಕುಟುಕಿದ್ದಾರೆ.
PublicNext
25/10/2020 08:32 pm