ಮುಂಬೈ- ಚೀನಾ ದೇಶಕ್ಕಿಂತ ಭಾರತ ಇನ್ನಷ್ಟು ಶಕ್ತಿಶಾಲಿಯಾಗಬೇಕಿದೆ. ಚೀನಾದ ವಿಸ್ತರಣಾವಾದಕ್ಕೆ ಪಾಠ ಕಲಿಸಲು ನಮ್ಮ ಸೈನ್ಯವನ್ನು ನಾವು ಮತ್ತಷ್ಟು ಬಲಿಷ್ಠಗೊಳಿಸುವ ಅಗತ್ಯತೆ ಇದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಆರ್ ಎಸ್ ಎಸ್ ನಿಂದ ಹಮ್ಮಿಕೊಂಡಿದ್ದ ವಿಜಯದಶಮಿ ರ್ಯಾಲಿ ಹಾಗೂ ಆಯುಧ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು ಚೀನಾ ದೇಶದ ವಿರುದ್ಧ ಭಾರತ ಮಾತ್ರವಲ್ಲ ಜಗತ್ತಿನ ಅನೇಕ ದೇಶಗಳು ತಿರುಗಿ ಬಿದ್ದಿವೆ. ನಮ್ಮ ದೇಶದ ಗಡಿಯಲ್ಲಿ ಚೀನಾ ಒಳನುಸುಳುವಿಕೆಗೆ ಭಾರತದ ಪ್ರತೀಕಾರ ಕಂಡು ಚೀನಾ ಆಘಾತಗೊಂಡಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಚೀನಾ ನಮ್ಮ ಗಡಿಯನ್ನು ಆ ಆಕ್ರಮಿಸಲು ಹವಣಿಸುತ್ತಿದೆ. ನಮ್ಮ ಶಾಂತಿ-ಸೌಹಾರ್ದಗಳನ್ನು ದೌರ್ಬಲ್ಯವೆಂದು ಭಾವಿಸಿದರೆ ಅದನ್ನು ಸಹಿಸಲಾರೆವು. ಇದನ್ನ ಭಾರತ ವಿರೋಧಿ ರಾಷ್ಟ್ರಗಳು ತಿಳಿದಿರಬೇಕು ಎಂದು ಮೋಹನ್ ಭಾಗವತ್ ಎಚ್ಚರಿಸಿದ್ದಾರೆ.
PublicNext
25/10/2020 02:25 pm