ಮಂಗಳೂರು-ಉಪಚುನಾವಣೆ ಗೆಲುವು ಕಾಣುವವರೆಗೂ ಡಿಕೆಶಿ ಸಹೋದರರು ಛಲ ಬಿಡೋದಿಲ್ಲ. ಹಣ ಖರ್ಚು ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ಸಿನಲ್ಲಿ ಹಣ ಖರ್ಚು ಮಾಡಲು ಇರುವ ವ್ಯಕ್ತಿ ಅಂದ್ರೆ ಅದು ಡಿಕೆಶಿ. ಹಣ ಖರ್ಚು ಮಾಡಿ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಶಿವಕುಮಾರ್ ಅವರಿಗೆ ಸಹೋದರ ಡಿ.ಕೆ ಸುರೇಶ್ ಹಾಗೂ ತಾಯಿಯ ಬೆಂಬಲ ಇದೆ. ಗೆಲುವು ತಮ್ಮದಾಗುವವರೆಗೆ ಅವರು ನಿದ್ದೆ ಮಾಡೋದಿಲ್ಲ. ಅವರೆಲ್ಲ ಮುಂದೆ ನಿಂತು ಎಲೆಕ್ಷನ್ ಗೆಲ್ಲಿಸುತ್ತಾರೆ ಅಂತಾ ಜನಾರ್ಧನ ಪೂಜಾರಿ ಹೇಳಿದ್ರು.
ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣೆ ರಂಗೇರಿದ್ದು ನವೆಂಬರ್ 3ರಂದು ಮತದಾನ ನಡೆಯಲಿದೆ.
PublicNext
25/10/2020 08:53 am