ಮೈಸೂರು-ಸಿದ್ದರಾಮಯ್ಯನವರೇ ತಾವು ರಾಜಕೀಯ ಮುತ್ಸದ್ಧಿಯಂತೆ ವರ್ತಿಸಿ. ಹೊರತಾಗಿ ಕಾಂಗ್ರೆಸ್ಸಿನ ಆಸ್ಥಾನ ವಿದೂಷಕನಂತೆ ಅಲ್ಲ. ನಳೀನ್ ಕುಮಾರ್ ಕಟೀಲ್ ಅವರನ್ನು ಹೀಯಾಳಿಸುವ ಭರದಲ್ಲಿ ನೀವು ಕಾಡು ಮನುಷ್ಯರಿಗೆ ಅವಮಾನ ಮಾಡಿದ್ದೀರಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಸಿದ್ದರಾಮಯ್ಯನವರೇ ನೀವೂ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಈ ಹೇಳಿಕೆಯನ್ನು ನೀವು ವಾಪಸ್ ಪಡೆಯಬೇಕು. ಮುತ್ಸದ್ಧಿಗಳು ಆಸ್ಥಾನ ವಿದೂಷಕರಂತೆ ಆಗಬಾರದು. ಇಂತಹ ಪದ ಬಳಕೆಯನ್ನ ಯಾರೂ ಒಪ್ಪುವುದಿಲ್ಲ. ಸುಖಾಸುಮ್ಮನೇ ಕಂಡವರಿಗೆಲ್ಲ ಸಂಧಿ ಪಾಠ ಮಾಡೋಕೆ ಬರ್ತೀರಿ. ಪ್ರಬುದ್ಧರಂತೆ ಕಾಣಿಸಿಕೊಲ್ಳು ಹೋಗಿ ಅಪ್ರಬುದ್ಧರಾಗುತ್ತಿದ್ದೀರಿ. ಹೀಗಾದರೆ ನಿಮ್ಮ ತಲೆಯಲ್ಲಿ ವಿವೇಚನೆ ಖಾಲಿ ಆಗಿದೆ ಎಂದು ಜನ ತಿಳಿಯುತ್ತಾರೆ ಎಂದು ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಕಾಡು ಮನುಷ್ಯ ಎಂಬ ಪದ ಬಳಕೆ ಅರಣ್ಯ ಸಂರಕ್ಷಕರಿಗೆ ಮಾಡುವ ಅವಮಾನ. ಎಷ್ಟೋ ಜನ ತಾವು ಕಾಡು ಮನುಷ್ಯರೆಂದು ಪ್ರಮಾಣ ಪತ್ರ ತೆಗೆದುಕೊಳ್ತಾರೆ. ಹೀಗಿರುವಾಗ ನೀವು ಒಂದು ಪಕ್ಷದ ರಾಜ್ಯಾಧ್ಯಕ್ಷರನ್ನು ಕಾಡು ಮನುಷ್ಯ ಎಂದು ಜರೆದಿದ್ದು ಸರೀನಾ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.
PublicNext
23/10/2020 10:47 am