ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ಅಚ್ಚರಿಯ ಬೆಳವಣಿಗೆ ಶ್ರೀರಾಮುಲು ಅವರು ಬಳ್ಳಾರಿಯಿಂದ ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಆರೋಗ್ಯ ಖಾತೆ ಬದಲಾವಣೆ ವಿಚಾರ ತಿಳಿಯದ ಶ್ರೀರಾಮಲು ತನ್ನ ಸಚಿವ ಸ್ಥಾನಕ್ಕೆ ಕತ್ತರಿ ಬೀಳುವ ಸುದ್ದಿ ಹೊರಬೀಳುತ್ತಿದ್ದಂತೆಯೇ ಕಕ್ಕಾಭಿಕ್ಕಿಯಾಗಿ ಬಳ್ಳಾರಿಯಿಂದ ರಾತ್ರಿಯೇ ಬೆಂಗಳೂರಿಗೆ ರಾಮುಲು ಬಂದಿದ್ದಾರೆ.
ಖಾತೆ ಬದಲಾವಣೆಗೆ ಬೇಸರಗೊಂಡಿರುವ ಸಚಿವ ರಾಮುಲು, ಇಂದು ಯಡಿಯೂರಪ್ಪ ಭೇಟಿ ಮಾಡಿ ಸಿಎಂ ಎದುರು ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ.
ಈ ಮೂಲಕ ಆರೋಗ್ಯ ಖಾತೆ ಬದಲಾವಣೆ ಮಾಡುವುದನ್ನು ರಾಮುಲು ನಿಕಾರಿಸಲಿದ್ದಾರೆ.
PublicNext
12/10/2020 09:07 am