ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ವಿವಿಐಪಿಗಳಿಗಾಗಿ ಖರೀದಿಸಿರುವ ವಿಶೇಷ ವಿಮಾನದ ಕುರಿತು ಕಟುವಾಗಿ ಟೀಕಿಸಿದ್ದಾರೆ.
ಸೈನಿಕರು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿರು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಬುಲೆಟ್ ಪ್ರೂಫ್ ರಹಿತ ಟ್ರಕ್‍ಗಳಲ್ಲಿ ಸೈನಿಕರನ್ನು ಹುತಾತ್ಮರಾಗಲು ಕಳುಹಿಸಲಾಗುತ್ತಿದೆ. ಆದರೆ ಸರ್ಕಾರ ಪ್ರಧಾನಿಗಾಗಿ 8,400 ಕೋಟಿ ರೂ.ಗಳ ವಿಮಾನ ಮೀಸಲಿಟ್ಟಿದೆ. ಇದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲಿ ಟ್ರಕ್ ಒಳಗೆ ಕುಳಿತಿದ್ದ ಕೆಲ ಸೈನಿಕರು, "ಇಂತಹ ರಸ್ತೆಯಲ್ಲಿ ಬುಲೆಟ್ ಪ್ರೂಫ್ ಟ್ರಕ್‍ನಲ್ಲಿ ಪ್ರಯಾಣಿಸುವುದೇ ಕಷ್ಟ. ಹೀಗಿರುವಾಗ ಬುಲೆಟ್ ಪ್ರೂಫ್ ರಹಿತ ಟ್ರಕ್ ಕಳುಹಿಸುವ ಮೂಲಕ ಅಧಿಕಾರಿಗಳು ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕಮಾಂಡರ್ ಇಂತಹ ಸಮಸ್ಯೆಗಳ ಬಗ್ಗೆ ಉನ್ನತ ಅಧಿಕಾರಿಗಳಿಗೆ ಏನನ್ನು ಹೇಳುವುದಿಲ್ಲ. ಇದಕ್ಕೆ ಮೂರು ಬಾರಿ ಕಲ್ಲಿನಿಂದ ಹೊಡೆದರೆ ಸಾಕು ಕತ್ತರಿಸಿ ಬೀಳುತ್ತದೆ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.
PublicNext
10/10/2020 02:06 pm