ಭೋಪಾಲ್: ಮಧ್ಯಪ್ರದೇಶದ ಜಬಲ್‌ಪುರ್‌ನ ಡುಮ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಏರ್ ಇಂಡಿಯಾ ವಿಮಾನವೊಂದು ಸ್ಕಿಡ್ ಆಗಿ ರನ್ವೇಯಿಂದ ಜಾರಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದೆಹಲಿ- ಜಬಲ್‌ಪುರ ವಿಮಾನವು ಲ್ಯಾಂಡಿಂಗ್ ಮಾಡುವಾಗ ಈ ಘಟನೆ ನಡೆದಿದ್ದು, ವಿಮಾನದಲ್ಲಿ 54 ಮಂದಿ ಪ್ರಯಾಣಿಕರಿದ್ದರು. ಡುಮ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಒಂದು ಚಕ್ರ ನೆಲಕ್ಕೆ ಅಪ್ಪಳಿಸಿದ್ದು, ದಿಢೀರ್ ಆಗಿ ಸ್ಫೋಟಗೊಂಡಿದೆ. ಘಟನೆ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.
PublicNext
13/03/2022 08:23 am