ಬೆಂಗಳೂರು: 'ಕನ್ನಡ ಹಾಡು ಹಾಕಿ' ಎಂದ ಮಹಿಳೆ ಮೇಲೆಯೇ ಕೆಎಫ್‌ಸಿ ಸಿಬ್ಬಂದಿಯೋರ್ವ ದರ್ಪ ತೋರಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೊಚ್ಚಿಗೆದ್ದ ಕನ್ನಡಿಗರು ಕೆಎಫ್‌ಸಿ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಿಳೆಯೊಬ್ಬರು ಕೆಎಫ್‌ಸಿ ರೆಸ್ಟೋರೆಂಟ್ಗೆ ಹೋಗಿದ್ದರು. ಈ ವೇಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅನ್ಯ ಭಾಷೆ ಹಾಡುಗಳನ್ನೇ ಹಾಕಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಮಹಿಳೆ ಕನ್ನಡ ಹಾಡು ಹಾಕಿ ಎಂದು ಕೆಎಫ್‌ಸಿ ಸಿಬ್ಬಂದಿಗೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಗೆ ಸಿಬ್ಬಂದಿ ವಾಗ್ವಾದಕ್ಕೆ ಇಳಿದು ಉದ್ಧಟತನ ಮೆರೆದಿದ್ದಾನೆ.
ಕೆಎಫ್‌ಸಿ ಸಿಬ್ಬಂದಿ ವಿರುದ್ಧ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಿಜೆಕ್ಟ್ ಕೆಎಫ್‌ಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಮಾಡಿದ್ದಾರೆ.
PublicNext
25/10/2021 10:41 pm