ನವದೆಹಲಿ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನಿವಾಸಿ, ಭಾರತೀಯ ಸೇನಾ ಯೋಧ ಕರ್ಣವೀರ್ ಸಿಂಗ್ ರಜಪೂತ್ ಅವರ ಜನ್ಮದಿನದಂದೇ ಬುಧವಾರ ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ.
ಯೋಧ ಕರ್ಣವೀರ್ ಸಿಂಗ್ ಅವರು ಹುತಾತ್ಮರಾಗುವ ಮುನ್ನ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ. ಯೋಧ ಕರ್ಣವೀರ್ ಸಿಂಗ್ ಅವರ ತಂದೆ ಪುತ್ರನ ವೀರ ಮರಣಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
"ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಲ್ಲಿ ಇಂದು ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ಮಗನಿಂದ ಹತ್ಯೆಗೆ ಒಳಗಾದವರು ಜನರಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರು ಮತ್ತು ಮುಗ್ಧ ಜನರನ್ನು ಕೊಲ್ಲುತ್ತಿದ್ದರು" ಎಂದು ಹೇಳಿದ್ದಾರೆ.
PublicNext
21/10/2021 03:37 pm