ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಕುಣಿತಹಳ್ಳಿ ಗ್ರಾಮದ ಸಮೀಪದ ಅರಣ್ಯದಲ್ಲಿ ನೂರಾರು ಕೋಳಿ ಮರಿಗಳು ಬಿದ್ದಿದ್ದನ್ನು ಕಂಡ ಸ್ಥಳೀಯರು ಮನೆಗೆ ಹೊತ್ತೊಯ್ದಿದ್ದಾರೆ.
ಕೋಳಿ ಸಾಕಾಣಿಕೆಗೆ ಸೂಕ್ತ ಬೆಲೆ ನೀಡುತ್ತಿಲ್ಲ ಎಂಬ ವಿಚಾರವಾಗಿ ರೈತರು ಚಿಕನ್ ಕಂಪನಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇತ್ತ ಚಿಕ್ಕಬಳ್ಳಾಪುರ ತಾಲೂಕು ಬಾದಗಾನಹಳ್ಳಿ, ಕಣಿತಹಳ್ಳಿ ರೈತರು ವಿಭಿನ್ನವಾಗಿ ಪ್ರತಿಭಟಿಸಿ ಕಂಪನಿಗಳು ತಂದು ಕೊಟ್ಟ ಕೊಳಿ ಮರಿಗಳನ್ನು ಕಾಡಿಗೆ ಬಿಟ್ಟು ಆಕ್ರೋಶ ವ್ಯಕ್ತಡಿಸಿದ್ದಾರೆ. ಒಂದು ಕಡೆ ರೈತರಿಗೆ ಆಕ್ರೋಶವಾದರೆ, ಇನ್ನೊಂದು ಕಡೆ ಸ್ಥಳೀಯರು ಬಿಟ್ಟ ಕೋಳಿಮರಿಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.
PublicNext
10/01/2021 02:41 pm