ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಲ್ಪ ಮಿಸ್‌ ಆಗಿದ್ರೂ ತಲೆ ಕಟ್‌- ಗಿನ್ನಿಸ್‌ ವಿಶ್ವ ದಾಖಲೆ ಬರೆದ ಯುವಕ

ಕೆಲವೊಂದು ಗಿನ್ನಿಸ್‌ ವಿಶ್ವ ದಾಖಲೆಗಳು ಮೈ ನಡುಗಿಸುವಂತೆ ಮಾಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಯುವಕನೊಬ್ಬ ವಿಶೇಷ ಕೆಲಸದ ಮೂಲಕ ವಿಶ್ವ ದಾಖಲೆ ಬರೆದಿದ್ದಾನೆ. ಗಿನ್ನಿಸ್ ದಾಖಲೆಯ ಪ್ರಯತ್ನದ ದೃಶ್ಯಗಳನ್ನು ನೋಡುವುದೇ ಒಂದು ಚೆಂದ.

ಚೀನಾದ ಝೂಯೂ ಫೀ ಎಂಬ ಯುವಕ ತನ್ನ ವೃತ್ತಿಯಲ್ಲಿ ಅದೆಷ್ಟು ಪರಿಪಕ್ವತೆ ಹೊಂದಿದ್ದಾರೆ ಎಂದರೆ ಅದಕ್ಕೆ ಅವರು ದಾಖಲೆ ಬರೆದ ಈ ವಿಡಿಯೋ ಸಾಕ್ಷಿಯಾಗಿದೆ. ಸಾಲಾಗಿ ನಿಂತಿದ್ದ ಯುವತಿಯರು ಧರಿಸಿದ್ದ ಹ್ಯಾಟ್‌ಗಳನ್ನು ಅತ್ಯಂತ ನಿಖರವಾಗಿ, ಯಾವುದೇ ಅಪಾಯವಿಲ್ಲದಂತೆ ಹಿಟಾಚಿಯ ಕೊಕ್ಕೆಯಿಂದ ತೆಗೆದು ಝೂಯೂ ಅಚ್ಚರಿ ಮೂಡಿಸಿದ್ದಾರೆ.

ಹ್ಯಾಟ್‌ ಧರಿಸಿದ್ದ ಯುವತಿಯರು ಭಯದಲ್ಲಿದ್ದರೂ ಝೂಯೂ ಮಾತ್ರ ಯಾವುದೇ ಅಂಜಿಕೆಯಿಲ್ಲದೆ ತಮ್ಮ ಕೆಲಸವನ್ನು ಅತ್ಯಂತ ನಿಖರವಾಗಿ ಮಾಡಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆ ತನ್ನ ಫೇಸ್‌ಬುಕ್ ಪುಟದಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಝೂಯೂ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

17/11/2020 07:06 pm

Cinque Terre

50.56 K

Cinque Terre

1