ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಣಿವರಿಯದೆ ವಿದ್ಯಾದಾನಕ್ಕೆ ಮುಂದಾದ ವೃದ್ಧ : 75 ವರ್ಷಗಳಿಂದ ಮರದ ಕೆಳಗೆ ಉಚಿತ ಶಿಕ್ಷಣ

ಭುವನೇಶ್ವರ್ : ಶ್ರೇಷ್ಠ ದಾನಗಳಲ್ಲಿ ವಿದ್ಯಾದಾನವು ಒಂದು ಗುರುವಿಗೆ ಸಮಾನರಾದವರು ಯಾರು ಇಲ್ಲ.

ಇಲ್ಲೋಬ್ಬ ವಯೋವೃದ್ಧ ಮಕ್ಕಳಿಗೆ ಜ್ಞಾನದ ಬುತ್ತಿಯನ್ನು ಸತತ 75 ವರ್ಷಗಳಿಂದ ಉಣಬಡಿಸುತ್ತಿದ್ದಾರೆ ಅದು ಕೂಡಾ ಬಿಡಿಗಾಸು ಪಡೆಯದೇನೆ ಎನ್ನುವುದು ಮಹತ್ವದ್ದು.

ಹೌದು ವೃದ್ಧರೊಬ್ಬರು ಯಾವುದೇ ಶುಲ್ಕ ತೆಗೆದುಕೊಳ್ಳದೆ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ.

ವೃದ್ಧನನ್ನು ನಂದ ಪ್ರಾಸ್ತಿ ಎಂದು ಗುರುತಿಸಲಾಗಿದೆ. ಇವರು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

ದೊಡ್ಡವರಿಗೆ ಮಾತ್ರ ರಾತ್ರಿ ಸಮಯದಲ್ಲಿ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.

ಬೋಧನೆ ಮೇಲಿನ ಉತ್ಸಾಹ ಅವರನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ. ಹೀಗಾಗಿ ಅವರು ಬರೋಬ್ಬರಿ 75 ವರ್ಷಗಳಿಂದ ನಿರಂತರವಾಗಿ ದಣಿವರಿಯದೇ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ.

ಜೊತೆಗೆ ಜಜ್ಪುರ್ ಜಿಲ್ಲೆಯ ಚಿಕ್ಕ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದರು.

ವೃದ್ಧ ಬರ್ತಂಡ ಗ್ರಾಮದವರಾಗಿದ್ದು, ಇವರ ಸೇವೆಯನ್ನು ಗುರುತಿಸಿ ಸರ್ಕಾರ ನೆರವು ನೀಡಲು ಮುಂದಾಗಿತ್ತು.

ಆದರೆ ನಂದಾ ಅವರು ಮಾತ್ರ ಸರ್ಕಾರದ ನೆರವನ್ನು ಪಡೆಯಲು ನಿರಾಕರಿಸಿದ್ದಾರೆ. ಅಲ್ಲದೆ ಹಳೆಯ ಮರದ ಕೆಳಗೆಯೇ ಕುಳಿತು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ನಂದಾ, ನಾನು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ.

ನಮ್ಮ ಹಳ್ಳಿಯನ್ನು ಹಲವಾರು ಮಂದಿ ಅನಕ್ಷರಸ್ಥರು ಇರುವುದು ನನ್ನ ಗಮನಕ್ಕೆ ಬಂದಿದೆ.

ಹೀಗಾಗಿ ಅವರಿಗೆ ಅಕ್ಷರ ಕಲಿಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಸದ್ಯ ನನ್ನ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಮೊಮ್ಮಕ್ಕಳಿಗೆ ನಾನು ಪಾಠ ಹೇಳಿಕೊಡುತ್ತಿದ್ದೇನೆ ಎಂದು ಹೇಳಿದರು.

ಮಳೆ, ಚಳಿ ಹಾಗೂ ಬಿಸಿಲು ಎನ್ನದೇ ಮಕ್ಕಳಿಗೆ ಅತ್ಯಂತ ಉತ್ಸಾಹದಿಂದ ಪಾಠ ಹೇಳಿಕೊಡುತ್ತಿದ್ದಾರೆ.

ಇವರ ಶಿಕ್ಷಣ ಸೇವೆ ಹೀಗೆ ಮುಂದುವರೆಯಲಿ ಎಂಬುದೇ ನಮ್ಮ ಆಶಯ.

Edited By : Nirmala Aralikatti
PublicNext

PublicNext

28/09/2020 07:41 pm

Cinque Terre

71.94 K

Cinque Terre

3