ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿಗೆ 2 ಸಾವಿರ ರೂ. ಮುಖಬೆಲೆಯ ನೋಟು ಚಲಾವಣೆಗೆ ತರಲು ಮನಸ್ಸಿರಲಿಲ್ಲ

ನವದೆಹಲಿ : ಭಾರತದ ಇತಿಹಾಸದಲ್ಲಿಯೇ ನೋಟ್ ಬ್ಯಾನ್ ಎಂಬುದು ಒಂದು ಮೈಲಿ ಗಲ್ಲಾಗಿ ಉಳಿಯಿತು.

ದೇಶದ ಜನ ಕಂಡರಿಯದ ರೀತಿಯಲ್ಲಿ ನೋಟ್ ಬ್ಯಾನ್ ಆಗಿರುವುದು ಅದರಿಂದಾಗ ಎಲ್ಲ ರೀತಿಯ ಬೆಳವಣಿಗೆಗಳು ಪ್ರತಿಯೊಬ್ಬರಿಗೂ ಗೊತ್ತು

ಸದ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ 2 ಸಾವಿರ ರೂ. ನೋಟುಗಳನ್ನು ಚಲಾವಣೆಗೆ ತರಲು ಇಷ್ಟವಿರಲಿಲ್ಲ ಎಂಬ ವಿಚಾರ ವೈರಲ್ ಆಗಿದೆ.

ಹೌದು 2016ರ ನವೆಂಬರ್ 8 ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಬಿಡುಗಡೆ ಮಾಡಲು ಮೋದಿಯವರಿಗೆ ಇಷ್ಟವಿರಲಿಲ್ಲ.

ಆದರೆ ನೋಟು ನಿಷೇಧ ಚರ್ಚೆಯಲ್ಲಿ ಅಧಿಕಾರಿಗಳ ಸಲಹೆಯನ್ನು ಒಪ್ಪಿದ ಬಳಿಕ ಹೊಸ ನೋಟು ಬಿಡುಗಡೆಗೆ ಸಹಮತ ಸೂಚಿಸಿದರು ಎಂದು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಬಹಿರಂಗ ಪಡಿಸಿದ್ದಾರೆ.

ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ರಿಕೆಗೆ ಲೇಖನ ಬರೆದಿರುವ ಅವರು, ಅಪನಗದೀಕರಣ ಸಿದ್ಧತೆಯ ವೇಳೆ 1 ಸಾವಿರ ರೂ. ನೋಟು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಮುದ್ರಿಸಬೇಕೆಂಬ ಸಲಹೆ ಇಷ್ಟವಾಗಿರಲಿಲ್ಲ.

ಆದರೆ ಹಣದ ಕೊರತೆ ನೀಗಿಸಲು ಅನಿವಾರ್ಯವಾಗಿ 2 ಸಾವಿರ ರೂ. ಮುದ್ರಿಸಬೇಕೆಂದು ಸಲಹೆ ನೀಡಿದ ಬಳಿಕ ಕೊನೆಗೆ ಮೋದಿ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಭಾರೀ ಟೀಕೆ ಕೇಳಿ ಬಂದಿದ್ದರೂ ಮೋದಿಯವರು ಅಧಿಕಾರಿಗಳನ್ನು ದೂಷಿಸದೇ ಸ್ವತಃ ತಾವೇ ಹೊಣೆಯನ್ನು ಹೊತ್ತುಕೊಂಡಿದ್ದರು.

ಕೆಲವು ವಿಚಾರಗಳ ಬಗ್ಗೆ ಸಮ್ಮತಿ ಇರದಿದ್ದರೂ ಜೊತೆಗಾರರು ನೀಡಿದ ಸಲಹೆಯನ್ನು ಒಪ್ಪಿಕೊಳ್ಳುವ ಗುಣ ಮೋದಿಯವರಲ್ಲಿದೆ ಎಂದು ಬರೆದುಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

18/09/2020 03:41 pm

Cinque Terre

78.99 K

Cinque Terre

0