ಚಿಕ್ಕಬಳ್ಳಾಪುರ : ಪೊಲೀಸ್ ಬಂದೋಬಸ್ತ್ ನಲ್ಲಿ ಜಿಲ್ಲೆಯ ಸೂಸೆಪಾಳ್ಯದ ಬೆಟ್ಟದ ಮೇಲೆ ಅಕ್ರಮವಾಗಿ ತಲೆ ಎತ್ತಿದ್ದ ಶಿಲುಬೆಯನ್ನ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇಂದು ತೆರವುಗೊಳಿಸುವ ಕಾರ್ಯ ನಡೆಸಿತು.
ಈ ತೆರವು ಕಾರ್ಯಾಚರಣೆಗೆ ಸ್ಥಳೀಯ ಕ್ರೈಸ್ತ ಸಮುದಾಯದವರು ಭಾರೀ ವಿರೋಧದ ವ್ಯಕ್ತಪಡಿಸಿದರು ಆದರೆ ಬೆಟ್ಟದ ಮೇಲೆ ಸರ್ಕಾರಿ ಗೋಮಾಳ ಜಾಗದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಬೃಹತ್ ಗಾತ್ರದ ಶಿಲುಬೆಯನ್ನ ತೆರವು ಮಾಡಲಾಯಿತು.
ಕೆಲವರು ಸರ್ಕಾರಿ ಗೋಮಾಳ ಜಾಗದಲ್ಲಿ ಅನಧಿಕೃವಾಗಿ ಶಿಲುಬೆ ನಿರ್ಮಾಣ ವಿರೋಧಿಸಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದಮ್ಮೆ ದಾಖಲಿಸಿದ್ದ ಪರಿಣಾಮ ನ್ಯಾಯಾಲಯ ಶಿಲುಬೆ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.
ಹಾಗಾಗಿ ಹೈಕೋರ್ಟಿನ ಆದೇಶದ ಮೇರೆಗೆ ಇಂದು ಎ.ಸಿ.ರಘುನಂದನ್ ನೇತೃತ್ವದಲ್ಲಿ ಶಿಲುಬೆಯನ್ನ ತೆರವು ಮಾಡಿ ಜಾಗವನ್ನ ಸರ್ಕಾರದ ವಶಕ್ಕೆ ಪಡೆಯಲಾಯಿತು.
PublicNext
23/09/2020 03:29 pm