ಲಕ್ನೋ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಉತ್ತರ ಪ್ರದೇಶದ ಹಪೂರ್ ಜಿಲ್ಲೆಯ ಗರ್ಮುಖ್ತೇಶ್ವರದಲ್ಲಿ ಮತ್ತು ಮೀರತ್ ಜಿಲ್ಲೆಯ ಹಸ್ತಿನಾಪುರದಲ್ಲಿ ನಡೆಯಬೇಕಿದ್ದ ಗಂಗಾ ಸ್ನಾನ ಮೇಳ ಮತ್ತು ದೀಪ ದಾನ ಹಬ್ಬವನ್ನು ಈ ವರ್ಷ ರದ್ದುಪಡಿಸಲಾಗಿದೆ.
"ಗಂಗಾ ಸ್ನಾನ ಮೇಳ ಸ್ಥಳದಲ್ಲಿ ನವೆಂಬರ್ 25ರಿಂದ 30ರವರೆಗೆ ಭಕ್ತರ ಆಗಮನಕ್ಕೆ ನಿಷೇಧ ಹೇರಲಾಗಿದೆ" ಎಂದು ಹಾಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸರ್ವೇಶ್ ಮಿಶ್ರಾ ತಿಳಿಸಿದ್ದಾರೆ.
PublicNext
24/11/2020 02:31 pm