ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕಾಶ್ಮೀರದ ಎಲ್‍ಓಸಿ ಬಳಿ ಗುಂಡಿನ ಚಕಮಕಿ– ನಾಲ್ವರು ಯೋಧರು ಹುತಾತ್ಮ, 3 ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಚಿಲ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿನ ಎಲ್‌ಓಸಿಯಲ್ಲಿ ಉಗ್ರರು ಭಾರತದೊಳಗೆ ನುಸುಳಲು ಮುಂದಾಗಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಯೋಧರು ಸ್ಥಳಕ್ಕೆ ಹೋದಾಗ ಗುಂಡಿನ ದಾಳಿ ಆರಂಭವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಅಧಿಕಾರಿ ಸೇರಿದಂತೆ ಮೂವರು ಸೇನಾ ಸೈನಿಕರು ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧ ಸಹ ಹುತಾತ್ಮರಾಗಿದ್ದಾರೆ.

Edited By : Vijay Kumar
PublicNext

PublicNext

08/11/2020 06:18 pm

Cinque Terre

62.96 K

Cinque Terre

3