ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮೈಸೂರು ಮೇಯರ್ ತಸ್ನೀಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮೇಯರ್ ತಸ್ನೀಂ ಅವರು, 'ಡಿಸಿ ರೋಹಿಣಿ ಸಿಂಧೂರಿ ಅವರು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಪ್ರೋಟೊಕಾಲ್ ಅರಿವು ಅವರಿಗಿಲ್ಲ. ದಸರಾ ಉದ್ಘಾಟನೆ ಸಂದರ್ಭ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ವಾಗತಿಸುವಾಗ ಮೈಸೂರಿನ ಪ್ರಥಮ ಪ್ರಜೆಗೆ ಅವಕಾಶ ನೀಡಬೇಕು. ಆದರೆ ಯಡಿಯೂರಪ್ಪ ಅವರನ್ನು ನಾವು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಹೋಗಿದ್ದಾಗ ಮೇಯರ್ ಅವರನ್ನು ಒಳಗೆ ಬಿಡಬೇಡಿ ಎಂದು ಪೊಲೀಸರಿಗೆ ಹೇಳಿದ್ದರು' ಎಂದು ಆರೋಪಿಸಿದ್ದಾರೆ.
ಇನ್ನು ದಸರಾ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲೇ ಮೇಯರ್ ಆಸನ ಇಡಬೇಕು. ಆದರೆ ಕೊನೆಯಲ್ಲಿ ನಮಗೆ ನೀಡಿದ್ದಾರೆ. ಎರಡೂ ಸಂದರ್ಭ ಅವಮಾನ ಮಾಡಿದ್ದಾರೆ ಎಂದು ಮೇಯರ್ ತಸ್ನೀಂ ಡಿಸಿ ವಿರುದ್ಧ ದೂರಿದ್ದಾರೆ.
PublicNext
21/10/2020 07:53 pm