ವಿಜಯಪುರ: ನಿರಂತರ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದೆ ಡೆಡ್ಲಿ ಸೋಂಕಿನಿಂದ ಬಳಲಿದ ಜನ ಈಗಾ ನೆರೆ ಭೀತಿಗೆ ನಲಗುತ್ತಿದ್ದಾರೆ.
ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟದ ರೈತ ಸಮುದಾಯ ತತ್ತರಿಸಿ ಹೋಗಿದೆ.
ರೈತರ ಸಂಕಷ್ಟ ಪರಿಸ್ಥಿತಿಯನ್ನು ಹಾಡಿನ ರೂಪದಲ್ಲಿ ಹಂಚಿಕೊಂಡಿರುವ ವಿಡಿಯೊ ವೈರಲ್ ಆಗಿದೆ.
ರೈತರೊಬ್ಬರು ಕಬ್ಬಿನ ಹೊಲದಲ್ಲಿ ನಿಂತು ರೈತರ ಗೋಳಿನ ಕಥೆಯನ್ನು ಜಾನಪದ ಶೈಲಿಯಲ್ಲಿ ಮನಮುಟ್ಟುವಂತೆ ಹಾಡಿದ್ದಾರೆ.
ಈ ರೈತ ಗೀತೆಯಲ್ಲಿ ಮಳೆಯಿಂದ ಆಗಿರುವ ಬೆಳೆಹಾನಿಯ ಜೊತೆಗೆ ಸರ್ಕಾರ ಸ್ಪಂದಿಸದೇ ಇರುವ ಬಗ್ಗೆ ಸಿಟ್ಟು... ದೇವರ ಬಗ್ಗೆ ಕೋಪ ಅಭಿವ್ಯಕ್ತಿಗೊಂಡಿದೆ.
ಹಾಡಿರುವ ರೈತ ಯಾರು, ಯಾವ ಊರು ಎಂಬುದು ತಿಳಿದುಬಂದಿಲ್ಲ.
PublicNext
15/10/2020 04:22 pm