ಅಹಮದಾಬಾದ್ : ಅಹಮದಾಬಾದ್ ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರದಲ್ಲಿ ಮಂಗಳವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ದೇವಾಲಯವನ್ನು ಮುಚ್ಚಲಾಗಿತ್ತು.
ಮೊದಲ ದಿನ ದೇವರಿಗೆ 3 ಸಾವಿರ ಕೆಜಿ ಸೇಬು ಹಣ್ಣಿನ ನೈವೇದ್ಯವನ್ನು ಮಾಡಲಾಗಿದೆ.
ದೇವಾಲಯದ ಆವರಣದಲ್ಲಿ ಹಣ್ಣಗಳನ್ನು ಜೋಡಿಸಿ ಇಟ್ಟು ಪೂಜಿಸಲಾಗಿದೆ.
ಇನ್ನು ಇಲ್ಲಿ ಪೂಜೆ ಮಾಡಲಾಗಿರುವ ಎಲ್ಲಾ ಸೇಬು ಹಣ್ಣುಗಳನ್ನ ಕೊರೊನಾ ರೋಗಿಗಳಿಗೆ ಹಂಚಲಾಗುತ್ತದೆ.
ಅಕ್ಟೋಬರ್ 17 ರಿಂದ ನವರಾತ್ರಿ ಶುರುವಾಗಲಿದೆ. ನವರಾತ್ರಿಯಲ್ಲಿ ಈ ಮಂದಿರಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
PublicNext
14/10/2020 03:16 pm