ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

8 ಲಕ್ಷಕ್ಕೆ ಜೋಡೆತ್ತುಗಳನ್ನ ಮಾರಿ ಮತ್ತೆ 17 ಲಕ್ಷಕ್ಕೆ ಖರೀದಿಸಿದ್ರು- ಯಾಕೆ ಗೊತ್ತಾ?

ಬಾಗಲಕೋಟೆ: 8 ಲಕ್ಷಕ್ಕೆ ಜೋಡೆತ್ತುಗಳನ್ನ ಮಾರಿ ಮತ್ತೆ 17 ಲಕ್ಷಕ್ಕೆ ಖರೀದಿಸಿದ ಪ್ರಸಂಗ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ‍ ನಡೆದಿದೆ.

ಗ್ರಾಮದ ಸಂಗಪ್ಪ ಮುಗಳಖೋಡ ಎಂಬವರ ಜೋಡೆತ್ತುಗಳು 17 ಲಕ್ಷ ರೂ.ಗೆ ಮಾರಾಟವಾಗಿವೆ. ಮಲ್ಲಪ್ಪ ಬೋರಡ್ಡಿ ಈ ಎತ್ತುಗಳನ್ನು ಖರೀದಿಸಿದ್ದಾರೆ. ಈ ಹಿಂದೆ ಮಲ್ಲಪ್ಪ ಬೋರಡ್ಡಿ ಅವರಿಂದ ಇದೇ ಎತ್ತುಗಳನ್ನು ಸಂಗಪ್ಪ 8 ಲಕ್ಷ ರೂ.ಗೆ ಖರೀದಿಸಿದ್ದರು.‌ ಈ ಜೋಡೆತ್ತುಗಳು ವಿವಿಧ ಕಡೆ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿವೆ.

ಈ ರೀತಿ ಗೆದ್ದ ಮೊತ್ತವೇ ಒಟ್ಟು ಒಂಬತ್ತು ಲಕ್ಷವಾಗಿದೆ. ಈಗ ಮತ್ತೆ ಹಳೇ ಮಾಲೀಕ ತನ್ನ ಜೋಡೆತ್ತುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾದ ಎತ್ತುಗಳನ್ನು ನೋಡುವುದಕ್ಕೆ ಜನರು ಜಮಾಯಿಸುತ್ತಿದ್ದಾರೆ.

Edited By : Vijay Kumar
PublicNext

PublicNext

11/10/2020 05:05 pm

Cinque Terre

41.36 K

Cinque Terre

2