ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ಕವಯತ್ರಿಗೆ 2020ರ ಸಾಹಿತ್ಯ ವಿಭಾಗದ ನೊಬೆಲ್‌ ಗೌರವ

ಸ್ಟಾಕ್‌ಹೋಮ್‌: 2020ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್‌ ಪ್ರಶಸ್ತಿಯನ್ನು ಗುರುವಾರ ಘೋಷಣೆ ಮಾಡಲಾಗಿದ್ದು, ಅಮೆರಿಕದ ಕವಯತ್ರಿ ಲೂಯಿಸ್‌ ಗ್ಲುಕ್ಸ್‌ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

1943ರಲ್ಲಿ ನ್ಯೂಯಾರ್ಕ್ ನಲ್ಲಿ ಜನಿಸಿದ ಅವರು ಮ್ಯಾಸಚೂಸೆಟ್ಸ್ ಕೇಂಬ್ರಿಡ್ಜ್ ನಲ್ಲಿ ವಾಸಿಸುತ್ತಿದ್ದಾರೆ. ಅವರು ಸಾಹಿತ್ಯದ ಜೊತೆಗೆ ಕನೆಕ್ಟಿಕಟ್‌ನ ನ್ಯೂ ಹೆವನ್‌ನ ಯೇಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1968ರಲ್ಲಿ 'ಫಸ್ಟ್‌ಬಾರ್ನ್‌' (Firstborn) ಕವನ ಸಂಕಲನದ ಮೂಲಕ ಸಾಹಿತ್ಯ ಜಗತ್ತಿಗೆ ಲೂಯಿಸ್ ಪ್ರವೇಶಿಸಿದರು. ಅಮೆರಿಕದ ಸಮಕಾಲೀನ ಸಾಹಿತ್ಯದಲ್ಲಿ ಬಹುಬೇಗ ಗುರುತಿಸಿಕೊಂಡರು. ಅವರು ಈವರೆಗೂ ಹನ್ನೆರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ ಹಾಗೂ ಕವನಗಳ ಕುರಿತು ಹಲವು ಪ್ರಬಂಧಗಳನ್ನು ಬರೆದಿದ್ದಾರೆ.

Edited By : Vijay Kumar
PublicNext

PublicNext

08/10/2020 05:14 pm

Cinque Terre

28.97 K

Cinque Terre

0