ದಾವಣಗೆರೆ: ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಇಬ್ಬರು ಗಾಯ ಗೊಂಡಿರುವ ಘಟನೆ ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ನಡೆದಿದೆ.
ಹಳೆಯ ಮಾಳಿಗೆ ಮನೆಯ ಗೋಡೆ ಹಾಗೂ ಮೇಲ್ಚಾವಣಿ ಏಕಾಏಕಿ ಕುಸಿದಿದೆ. ಮನೆಯಲ್ಲಿದ್ದ ನಿಂಗಪ್ಪ ಹಾಗೂ ಅವರ ಪತ್ನಿ ಕೆಂಚಮ್ಮ(50) ಅವರಿಗೆ ತೀವ್ರ ಗಾಯಗಳಾಗಿವೆ. ನಿಂಗಪ್ಪ (60) ಅವರ ಕಾಲುಮುರಿದಿದ್ದು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಸಂತೋಷ್ ಕುಮಾರ್ ಹಾಗೂ ಆರ್.ಐ.ಕುಬೇರನಾಯ್ಕ, ಶ್ರೀನಿವಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
PublicNext
06/09/2022 04:29 pm