ಮಧುಗಿರಿ: ತಾಲೂಕಿನ ಚೆನ್ನ ಸಾಗರ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದಿದ್ದ ಮಳೆಗೆ ಜಯಮಂಗಲಿ ನದಿ ಉಕ್ಕಿ ಹರಿದಿರುವ ಪರಿಣಾಮ ಗ್ರಾಮ ಸಂಪೂರ್ಣ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ 15 ದಿನಗಳ ಹಿಂದೆ ಬಿದ್ದಂತಹ ಮಳೆಗೆ ಗ್ರಾಮ ಜಲಾವೃತಗೊಂಡು, ಗ್ರಾಮಸ್ಥರು ತತ್ತರಿಸಿದ್ದರು ಈಗೀಗ ಚೇತರಿಸಿಕೊಳ್ಳುತ್ತಿದ್ದ ಗ್ರಾಮಸ್ಥರಿಗೆ ಮತ್ತೆ ವರುಣಾಘಾತವಾಗಿದ್ದು ಗ್ರಾಮಸ್ಥರು ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಆಡಳಿತ ಹೆಚ್ಚಿನ ಸಹಾಯವನ್ನು ನಮಗೆ ಮಾಡಬೇಕು ಎಂದು ಗ್ರಾಮಸ್ಥರು ಅವಲತ್ತು ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಮಳೆಯ ಅವಾಂತರದಿಂದ ಸ್ಥಳೀಯ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ವರದಿ ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು.
PublicNext
05/09/2022 05:34 pm