ಚಾಮರಾಜನಗರ: ಬೇಟೆಯಾಡಲು ಬೆನ್ನಟ್ಟಿದ್ದ ಹುಲಿಯನು ಎತ್ತು ಬೆದರಿಸಿ ವಾಪಸ್ ಕಾಡಿಗೆ ಅಟ್ಟಿಸಿದೆ. ಈ ವಿಸ್ಮಯಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ನಾಗರಹೊಳೆ ಅಭಯಾರಣ್ಯದ ಮೈಸೂರು-ಮಾನಂದವಾಡಿ ರಸ್ತೆ ಬದಿ ಈ ಘಟನೆ ನಡೆದಿದೆ.
ಇಂದು ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ಈ ಘಟನೆ ನಡೆದಿದೆ. ಅತ್ಯಂತ ಅಪರೂಪ ಎನ್ನಬೇಕಾದ ಈ ದೃಶ್ಯ ಎಚ್.ಡಿ ಕೋಟೆಗೆ ತೆರಳುತ್ತಿದ ಪ್ರಯಾಣಿಕರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೃಶ್ಯದಲ್ಲಿ ಹುಲಿಯನ್ನು ಎದುರಿಸಿದ ಎತ್ತನ್ನು ಮಾಸ್ತಿ ಗುಡಿಗೆ ಭಕ್ತರು ನೀಡಿದ್ದು ಎನ್ನಲಾಗಿದೆ. ಈ ಎತ್ತು ದೇವಾಲಯದ ಅಕ್ಕಪಕ್ಕದಲ್ಲೇ ಇರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
PublicNext
30/08/2022 10:36 pm