ಗದಗ: ಗದಗ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೂ ವರುಣಾರ್ಭಟ ಮುಂದುವರಿದ ಪರಿಣಾಮ ಕರೆಕಟ್ಟೆ, ಹಳ್ಳಕೊಳ್ಳಗಳು ಕೋಡಿ ಬಿದ್ದಿವೆ. ಮೀನು ಸಾಕಾಣಿಕೆ ಕೃಷಿ ಮಾಡಿದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿ ಕೆರೆ ಕೋಡಿ ಬಿದ್ದಿದ್ದು, ಮೀನುಗಳನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ತುಂಬಿ ಹರಿಯುವ ನೀರಿಗೆ ಅಪಾರ ಮೀನುಗಳು ಕೊಚ್ಚಿ ಹೋಗುತ್ತಿವೆ.
ಗೋರಬಂಜಾರ ಮೀನುಗಾರಿಕೆ ಸಹಕಾರಿ ಸಂಘದಿಂದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲಾಗಿತ್ತು. ನೀರಿನ ರಭಸಕ್ಕೆ ಕೆರೆಯಿಂದ ಹೊರಬಂದ ಮೀನುಗಳನ್ನ ಸಾರ್ವಜನಿಕರು ಹಿಡಿದುಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೇ ಕೋಡಿ ಬಿದ್ದ ಪರಿಣಾಮ ಅಕ್ಕಪಕ್ಕದ ಜಮೀನುಗಳಿಗೂ ನೀರು ನುಗ್ಗಿದೆ. ಇನ್ನು ಮೆಕ್ಕೆಜೋಳ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿವೆ.
PublicNext
30/08/2022 02:53 pm