ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮುದ್ದು ಗಿಣಿಗಳನ್ನು ದೇಣಿಗೆ ನೀಡಿದ ದಂಪತಿ..!?

ತುಮಕೂರು: ಇತ್ತೀಚೆಗೆ ಕಾಣೆಯಾಗಿದ್ದ 'ರುಸ್ತುಮಾ' ಹೆಸರಿನ ಮುದ್ದಿನ ಗಿಳಿ ತುಮಕೂರಿನ ಬಂಡೆಪಾಳ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಗಿಳಿ ಹುಡುಕಿ ಕೊಟ್ಟವರಿಗೆ ಮಾಲೀಕ ಅರ್ಜುನ್ ಅವರು ಬರೋಬ್ಬರಿ 85 ಸಾವಿರ ರೂಪಾಯಿ ಬಹುಮಾನ ಕೊಟ್ಟು ಮನೆಗೆ ತೆಗೆದು ಕೊಂಡು ಹೋಗಿದ್ದರು.

ಇದೀಗ ಆ ಎರಡು ಗಿಳಿಗಳನ್ನು ಗುಜರಾತಿನ ಸರ್ದಾರ್ ವಲ್ಲಭಾಯಿ ಪಟೇಲ್ ಜೂವಾಲಾಜಿಕಲ್ ಪಾರ್ಕ್‌ಗೆ ದೇಣಿಗೆಯಾಗಿ ನೀಡಿದ್ದಾರೆ. ಜುಲೈ 16ರಂದು ತುಮಕೂರಿನ ಜಯನಗರದ ನಿವಾಸಿ ಅರ್ಜುನ್ ಎಂಬುವರ ಆಫ್ರಿಕನ್ ಗ್ರೇ ತಳಿಯ ಗಿಳಿ ಕಾಣೆಯಾಗಿತ್ತು. ಮುದ್ದಿನ ಗಿಳಿ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಲ್ಲದೇ ತಾವು ಸಹ ಗಿಳಿಗಾಗಿ ಹುಡುಕಾಟ ನಡೆಸಿದ್ದರು. ತುಮಕೂರಿನ ಬಂಡೆಪಾಳ್ಯ ಗ್ರಾಮದ ಶ್ರೀನಿವಾಸ್ ಎಂಬು ವರು ತಮ್ಮ ಮನೆ ಮುಂದೆ ಕೂತಿದ್ದ ಈ ಅಪರೂಪದ ಗಿಳಿಯನ್ನು ಸಂರಕ್ಷಿಸಿಟ್ಟಿದ್ದರು. ಬಳಿಕ ಗಿಳಿಯೊಂದು ಕಾಣೆಯಾದ ಸುದ್ದಿ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದೆ. ಗಿಳಿಯ ಮಾಲೀಕ ಈ ಬಗ್ಗೆ ಪ್ರಚಾರ ಮಾಡಿದ್ದಲ್ಲದೆ ಮಾಧ್ಯಮಗಳಲ್ಲಿಯೂ ಸುದ್ದಿ ಬಿತ್ತರವಾಗಿದ್ದರ ಕುರಿತು ಅಕ್ಕಪಕ್ಕದ ಮನೆಯವರು ಶ್ರೀನಿವಾಸ್​ಗೆ ತಿಳಿಸಿದ್ದಾರೆ. ನಂತರ ಅವರು ಅರ್ಜುನ್ ಮೊಬೈಲ್ ನಂಬರ್​​ಗೆ ಕರೆ ಮಾಡಿ ಸಂಪರ್ಕಿಸಿ ಗಿಣಿಯನ್ನು ವಾಪಸ್ ಕೊಟ್ಟಿದ್ದಾರೆ.

ಮತ್ತೆ ಪ್ರೀತಿಯಿಂದ ಸಾಕಿದ ಗಿಳಿ ಮರಳಿ ಗೂಡು ಸೇರುತ್ತಿದ್ದಂತೆ ಮಾಲೀಕ ಅರ್ಜುನ್, 85,000 ರೂಪಾಯಿ ಬಹುಮಾನ ನೀಡಿದ್ದರು. ಮೊದಲು 50 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಲಾಗಿದ್ದರೂ ಸಂತಸದಿಂದ ಮೊತ್ತವನ್ನು ಹೆಚ್ಚಿಸಿದ್ದರು, ರುಸ್ತುಮಾ ಮರಳಿ ಗೂಡು ಸೇರಿರು ವುದಕ್ಕೆ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು. ಇದೀಗ ಅರ್ಜುನ ಅವರು ತಮ್ಮ ಖಾಸಗಿ ವಾಹನದಲ್ಲಿ ಗುಜರಾತಿನಲ್ಲಿರುವ ಪಾರ್ಕಿಗೆ ಬಿಟ್ಟು ಬಂದಿದ್ದು ಮತ್ತೆ ಸುದ್ದಿಯಾಗಿದ್ದಾರೆ. ಮತ್ತೆ ಗಿಣಿಗಳು ಕಾಣೆಯಾದರೆ ನೋವಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಅವುಗಳನ್ನು ದೇಣಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ವಿಚಾರ ಜಿಲ್ಲೆಯಾದ್ಯಂತ ಸದ್ದು ಮಾಡಿದೆ.

Edited By :
PublicNext

PublicNext

19/08/2022 08:35 am

Cinque Terre

69.57 K

Cinque Terre

0