ಕಾಗವಾಡ : ಸಹ್ಯಾದ್ರಿ ಘಟ್ಟದಲ್ಲಿ ಧಾರಾಕಾರವಾಗಿ ಕಳೆದು ಒಂದು ವಾರದಿಂದ ಸುರಿದ ಮಳೆಗೆ ಕೃಷ್ಣಾ ನದಿಯ ಒಳ ಹರಿಯುವ ನೀರು ಪ್ರಮಾಣ ಹೆಚ್ಚಾಗಿರುವ ಪರಿಣಾಮ ಉಗಾರ ಕುಡಚಿ ಮಾರ್ಗದ ಸೇತುವೆ ಜಲಾವೃಗೊಂಡಿದೆ. ಈ ಹಿನ್ನೆಲೆ ಕಾಗವಾಡ ಜಮಖಂಡಿ ರಾಜ್ಯ ಹೆದ್ದಾರಿ ಮೇಲಿನ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಿ ತಹಶೀಲ್ದಾರ್ ರಾಜೇಶ್ ಬುರ್ಲಿ ಮಾಹಿತಿ ನೀಡಿದ್ದಾರೆ.
ಬುಧವಾರ ಕಾಗವಾಡ ಜಮಖಂಡಿ ಮಾರ್ಗದ ಉಗಾರ ಕುಡಚಿ ಮಾರ್ಗದ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ನೀರಿನ ಹರಿವು ಅಧಿಕವಾಗಿದ್ದು ಅದರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು, ಸೇತುವೆ ಮೇಲಿನ ಪ್ರಯಾಣ ಅಪಾಯಕಾರಿಯಾಗಿದೆ. ಇದನ್ನು ಗಮನಿಸಿದ ತಹಶೀಲ್ದಾರರು ರಾಜೇಶ್ ಬುರ್ಲಿ ಅಧಿಕಾರಿಗಳ ಸಭೆ ಕರೆದು ಈ ಮಾರ್ಗ ಮೇಲಿನ ಸಂಚಾರ ಸೇವೆ ಬ್ಯಾರಿಕೇಡ್ ಹಾಕಿಸಿ ಸ್ಥಗಿತಗೊಳಿಸಿದ್ದಾರೆ.
ರಾಜಾಪುರ ಬ್ಯಾರೇಜ್‍ದಿಂದ ಪ್ರತಿ ಸೆಕೆಂಡ್ 1 ಲಕ್ಷ 20, ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದೇ ರೀತಿ ಆಲಮಟ್ಟಿಗೆ ಅಧಿಕ ನೀರು ಹರಿಸಲಾಗುತ್ತದೆ. ಕುಡಚಿ ಸೇತುವೆ ಮೇಲಿನ ನೀರು ಹರಿದು ಹೋಗುತ್ತಿದ್ದರಿಂದ ಯಾವುದೇ ಅಪಾಯಕಾರಿ ಘಟನೆ ನಡೆಯಬಾರದೆಂದು ಮುನ್ನೆಚ್ಚರಿಕೆವಹಿಸಲಾಗಿದೆ.
-ಸಂತೋಷ ಬಡಕಂಬಿ
PublicNext
10/08/2022 09:20 pm