ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷ : ಈ ಬಗ್ಗೆ ಡಿಸಿಪಿ ಹೇಳಿದ್ದೇನು!

ಬೆಳಗಾವಿ: ಬೆಳಗಾವಿಯ ಜಾಧವ ನಗರದಲ್ಲಿ ಚಿರತೆ ದಾಳಿ ಹಿನ್ನೆಲೆಯಲ್ಲಿ ಡಿಸಿಪಿ ರವೀಂದ್ರ ಗಡಾದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು ಹೊರಗೆ ಬಾರದೇ ಮನೆಯಲ್ಲಿಯೇ ಇದ್ದು ಚಿರತೆಯ ಶೋಧಕ್ಕೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಹಾಗೂ ಆರ್ ಎಫ್ ಒ ರಾಕೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ರವೀಂದ್ರ ಗಡಾದಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಜಾಧವ್ ನಗರದಲ್ಲಿ ಚಿರತೆಯೊಂದು ಗೌಂಡಿ ಮೇಲೆ ಅಟ್ಯಾಕ್ ಮಾಡಿದೆ.

ಸದ್ಯ ಅವರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕಳಿಸಲಾಗಿದೆ. ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಮ್ಮ ಪೊಲೀಸ್ ಇಲಾಖೆ ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸಿದೆ. ಇನ್ನು ಸರ್ವಾಜನಿಕರು ಈ ಚಿರತೆಯನ್ನು ಹಿಡಿಯಲು ಸಹಕರಿಸಬೇಕು. ಯಾರೂ ಕೂಡ ಮನೆಯಿಂದ ಹೊರಬರಬಾರದು. ಮಕ್ಕಳನ್ನು ಯಾರೂ ಕೂಡ ಹೊರಗೆ ಬರಲು ಬಿಡಬೇಡಿ. ಎಲ್ಲರೂ ಕೂಡ ಹುಷಾರಾಗಿರಿ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

Edited By : Nagesh Gaonkar
PublicNext

PublicNext

05/08/2022 07:44 pm

Cinque Terre

29.67 K

Cinque Terre

0