ಕೊಚ್ಚಿ: ಕೇರಳ ರಾಜ್ಯದಲ್ಲಿ ವರುಣನ ಅರ್ಭಟ ಜೋರಾಗಿದೆ. ಇದರಿಂದ 12 ಜನ ಮೃತಪಟ್ಟಿದ್ದಾರೆ. 10 ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ.12 ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಸತತ ಸುರಿದ ಮಳೆಗೆ ಇಲ್ಲಿಯ ಪೆರಿಯಾರ್ ನದಿ ತುಂಬಿ ಹರೆಯುತ್ತಿದೆ. ಕೊಚ್ಚಿಯ ಆಲುವಾ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ.
ಭಾರೀ ಮಳೆಯಿಂದ ಕೇರಳದ ಜನಕ್ಕೆ ಪ್ರವಾಹದ ಭೀತಿ ಕೂಡ ಎದುರಾಗಿದ್ದು, ಜನ ಜೀವ ಅಸ್ತವ್ಯಸ್ತಗೊಂಡಿದೆ.
PublicNext
03/08/2022 05:21 pm